ಭಾರತ, ಏಪ್ರಿಲ್ 9 -- ಕನ್ನಡದ ಜನಪ್ರಿಯ ನಟ ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಚಿತ್ರ ನಿರ್ಮಾಪಕರು. ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಬಗ್ಗೆ ನಟಿ ಖುಶ್ಬೂ ಸಂದರ್ಶನವೊಂದರಲ್ಲಿ ಹೆಮ್ಮೆಯಿಂದ ಮಾತನಾಡಿದ್ದಾರೆ. ಆ ಕಾಲದಲ್ಲಿ ರವಿಚಂದ್ರನ್ ತಂದೆ ಆಸ್ಪತ್ರೆ ಸೇರಿದ್ದ ಖುಶ್ಬೂ ತಾಯಿಯನ್ನು ಡಿಸ್ಚಾರ್ಜ್ ಮಾಡಿಸಲು 36 ಸಾವಿರ ರೂಪಾಯಿ ಕಟ್ಟಿದ್ದರು. ಈ ವಿಚಾರವನ್ನು ಸ್ವತಃ ಖುಶ್ಬೂ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ಕನ್ನಡಿಗರಿಗೆ ತಿಳಿಯಲಿ ಎನ್ನುವ ಉದ್ದೇಶದಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ ದೀಪಾ ಹೀರೆಗುತ್ತಿ. ಅವರು ಬರೆದುಕೊಂಡ ಪೋಸ್ಟ್‌ನ ಹೀಗಿದೆ.

ಇವರು 'ರಣಧೀರ' ಚಿತ್ರೀಕರಣ ಸಮಯದಲ್ಲಿ ನಟಿ ಖುಶ್ಬೂ ಅವರ ತಾಯಿಯ ಆಸ್ಪತ್ರೆ ಬಿಲ್ 36 ಸಾವಿರ ರೂಪಾಯಿ ಕಟ್ಟಿ, ತಾಯಿಯನ್ನು ಡಿಸ್ಚಾರ್ಜ್ ಮಾಡಿಸಿದ್ದರು.

ಈಗ ತಾನೇ ತಾರೆ ಖುಶ್ಬೂ ಅವರ ಒಂದು ವಿಡಿಯೊ ನೋಡಿದೆ. ಖುಶ್ಬೂ ಅವರಿಗೆ ಆಗ ಹದಿನೇಳು ವರ್ಷ. ಅವರ ಮೊದಲ ಕನ್ನಡ ಸಿನಿಮಾ ರಣಧೀರಕ್ಕಾಗಿ ಚೆನ್ನೈ ಸುತ್...