ಬೆಂಗಳೂರು, ಮೇ 1 -- ಸುದೀರ್ಘ ಅವಧಿಯ ರಜೆ ಇದ್ದಾಗ ಬೋರ್‌ ಆಗುವುದು ಸಮಾನ್ಯ. ಇಂಥಾ ಸಮಯದಲ್ಲಿ ಏನಾದರೂ ಅಲ್ಪಾವಧಿಯ ಕೋರ್ಸ್‌ಗಳನ್ನು ಮಾಡಿದರೆ ಸಮಯದ ಸದ್ಬಳಕೆ ಆಗುತ್ತದೆ. ಆನ್‌ಲೈನ್‌ ಮಾತ್ರವಲ್ಲದೆ ಆಫ್‌ಲೈನ್‌ ಮೂಲಕವೂ ಕೆಲವೊಂದು ಅಗತ್ಯ ಕೋರ್ಸ್‌ಗಳನ್ನು ಮಾಡಬಹುದು.

ಡಿಜಿಟಲ್ ಮಾರ್ಕೆಟಿಂಗ್: ಈ ಕೋರ್ಸ್ ಮೂಲಕ ನೀವು ಡಿಜಿಟಲ್ ಮಾರ್ಕೆಟಿಂಗ್ ಪರಿಕರಗಳು, ಸಾಮಾಜಿಕ ಮಾಧ್ಯಮ ಜಾಹೀರಾತು, ಇಮೇಲ್ ಮಾರ್ಕೆಟಿಂಗ್ ಮತ್ತು ಇತರ ಆನ್‌ಲೈನ್ ಮಾರ್ಕೆಟಿಂಗ್ ಕುರಿತು ಕಲಿಯಬಹುದು. ಈ ಕೋರ್ಸ್‌ನ ಅವಧಿ 3 ತಿಂಗಳಿಂದ 12 ತಿಂಗಳವರೆಗೆ ಇರುತ್ತದೆ.

ವೆಬ್ ಡಿಸೈನಿಂಗ್ & ಡೆವಲಪ್ಮೆಂಟ್: ಈ ಕೋರ್ಸ್‌ನಲ್ಲಿ ನೀವು ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸುವುದು ಮತ್ತು ತಾಂತ್ರಿಕ ಕೌಶಲ್ಯಗಳನ್ನು ಕಲಿಯಬಹುದು. HTML, CSS ಮತ್ತು Javascript ಇತ್ಯಾದಿಗಳಂತೆ. ಈ ಕೋರ್ಸ್‌ನ ಅವಧಿ 2 ರಿಂದ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಗೂ ಇರುತ್ತದೆ. ನುರಿತ ವೆಬ್‌ ಡಿಸೈನರ್‌ಗಳಿಗೆ ಬಹುಬೇಡಿಕೆ ಇದೆ.

ಗ್ರಾಫಿಕ್ ಡಿಸೈನಿಂಗ್: ಈ ಕೋರ್ಸ್‌ನಲ್ಲಿ ನ...