Bengaluru, ಮಾರ್ಚ್ 6 -- ನಟ ಕಿಶೋರ್‌ ತನ್ನ ಎರಡು ದಶಕಗಳ ಸಿನಿಮಾ ಕರಿಯರ್‌ನಲ್ಲಿ ಸುದೀಪ್, ಯಶ್, ಅಲ್ಲು ಅರ್ಜುನ್, ಚಿರಂಜೀವಿ, ರಾಮ್ ಚರಣ್, ಮಮ್ಮುಟ್ಟಿ, ಮೋಹನ್ ಲಾಲ್, ರಿಷಬ್‌ ಶೆಟ್ಟಿ ಮುಂತಾದ ನಟರ ಜತೆ ಸಹನಟರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಪೂರ್ಣವಾಗಿ ಸಮರ್ಪಣೆ ಮಾಡುವ ವಿಷಯದಲ್ಲಿ ಕಿಶೋರ್‌ಗೆ ಶಿವರಾಜ್‌ ಕುಮಾರ್‌ ಮತ್ತು ರಜನಿಕಾಂತ್‌ ಇಷ್ಟವಂತೆ. ಈ ಇಬ್ಬರು ನಟರು ಸಿನಿರಂಗದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಈಗ ಹಣಕಾಸಿನ ದೃಷ್ಟಿಯಿಂದ ಸಿನಿಮಾ ಸೆಟ್‌ನಿಂದ ಸೆಟ್‌ಗೆ ಓಡಬೇಕಾದ ಅವಶ್ಯಕತೆ ಇಲ್ಲ. ಹಣಕ್ಕಾಗಿ ಚಿತ್ರ ಮಾಡದೆ ಇದ್ದರೂ ನಡೆಯುತ್ತದೆ. ಹೀಗಿದ್ದರೂ ಇವರು ಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಾರೆ. ಯಾಕೆಂದರೆ, ಇವರಿಗೆ ಸಿನಿಮಾ ಎಂದರೆ ಹಣ ಮಾಡುವುದಲ್ಲ ಎಂದು ಕೈರಾಮ್ ವಾಶಿ ಜತೆಗಿನ ಮಾತುಕತೆಯಲ್ಲಿ ನಟ ಕಿಶೋರ್‌ ಹೇಳಿದ್ದಾರೆ.

"ಶಿವರಾಜ್‌ ಕುಮಾರ್‌ ಮತ್ತು ರಜನಿಕಾಂತ್‌ ಅಷ್ಟು ವರ್ಷಗಳಲ್ಲಿ ತಾವು ಗಳಿಸಿದ ಅನುಭವ ಮತ್ತು ಜನಪ್ರಿಯತೆಯನ್ನು "ಸಿನಿಮಾರಂಗ ಚಲನಶೀಲವಾಗಿರಲು ಮತ್ತು ...