ಭಾರತ, ಮೇ 14 -- ಜೀಕನ್ನಡ ವಾಹಿನಿಯು ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ನ ಪ್ರೊಮ ಹಂಚಿಕೊಂಡಿದೆ. ಅದರಲ್ಲಿ ನಟ ದರ್ಶನ್‌ ಧ್ವನಿ ಕೇಳಿ ನಟಿ ಪುನೀತರಾಗಿದ್ದಾರೆ. ರವಿಚಂದ್ರನ್‌ ಕೂಡ ನಟಿಗೆ ಮಾತಿನ ಕಚಗುಳಿ ಇಟ್ಟಿದ್ದಾರೆ.

ನಟ ದರ್ಶನ್‌ ಜತೆ ಬುಲ್‌ ಬುಲ್‌ ಸಿನಿಮಾದ ಮೂಲಕ ರಚಿತಾ ರಾಮ್‌ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. ಅಂದಿನಿಂದ ಪಡೆದ ಖ್ಯಾತಿಯನ್ನು ನಟಿ ಇಂದಿನವರೆಗೂ ಉಳಿಸಿಕೊಂಡಿದ್ದಾರೆ.

ರಚಿತಾ ರಾಮ್‌ ಅವರ ಮೂಲ ಹೆಸರು ಬಿಂದ್ಯಾ ರಾಮ್‌. ಇವರು ಕನ್ನಡ ಧಾರಾವಾಹಿ "ಅರಸಿ" ಮೂಲಕ ನಟನೆ ಆರಂಭಿಸಿದರು.

ಟಿವಿ ಸೀರಿಯಲ್‌ನಲ್ಲಿ ಪಡೆದ ಖ್ಯಾತಿ ಬಳಿಕ ಇವರಿಗೆ ದರ್ಶನ್‌ ನಟನೆಯ ಬುಲ್‌ ಬುಲ್‌ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಮೊದಲ ಸಿನಿಮಾದಲ್ಲಿ ಪಡೆದ ಯಶಸ್ಸು ಇವರ ಖ್ಯಾತಿ ಹೆಚ್ಚಿಸಿತು.

ಬುಲ್‌ ಬುಲ್‌ ನಂತರ ಇವರು ದಿಲ್‌ ರಂಗೀಲಾ ಮತ್ತು ಅಂಬರೀಶಾ ಸಿನಿಮಾಗಳಲ್ಲಿ ನಟಿಸಿದರು. ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ, ಪುಷ್ಪಕ ವಿಮಾನ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸೀತಾರಾಮ ಕಲ್ಯಾಣ, ನಟ ಸಾರ್ವಭ...