Bengaluru, ಏಪ್ರಿಲ್ 18 -- ತಮಿಳು ನಟ ಸೂರ್ಯ ಇದೀಗ ರಗಡ್‌ ಅವತಾರದಲ್ಲಿ ರೆಟ್ರೋ ಸಿನಿಮಾ ಮೂಲಕ ಎಂಟ್ರಿಕೊಟ್ಟಿದ್ದಾರೆ. ಖಡಕ್‌ ಎನಿಸುವ ಟ್ರೇಲರ್‌ ಇಂದು (ಏ. 18) ಬಿಡುಗಡೆ ಆಗಿದ್ದು, ಮೇ 1ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಮೂಲ ತಮಿಳಿನ ಜತೆಗೆ ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್‌ ಆಗಿ ತೆರೆಗೆ ಬರಲಿದೆ. ಅದರಂತೆ ಈ ಮೂರು ಭಾಷೆಗಳ ಟ್ರೇಲರ್‌ ಇದೀಗ ಬಿಡುಗಡೆ ಆಗಿದೆ.

ಚೆನ್ನೈನಲ್ಲಿ ನಡೆದ ಗ್ರ್ಯಾಂಡ್ ಇವೆಂಟ್‌ನಲ್ಲಿ ರೆಟ್ರೋ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಟ್ರೇಲರ್‌ನಲ್ಲಿ ಹಲವು ಲುಕ್‌ಗಳಲ್ಲಿ ಸೂರ್ಯ ಕಂಡಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಶೈಲಿಯಲ್ಲಿ ಟ್ರೇಲರ್‌ನಲ್ಲಿ ವೇಗವಿದೆ. ಪವರ್‌ ಫುಲ್ ಆ್ಯಕ್ಷನ್‌ ದೃಶ್ಯಗಳು ಮೈನವಿರೇಳಿಸುವಂತಿವೆ. ಒಟ್ಟಾರೆ ಸೂರ್ಯ ಮತ್ತು ಕಾರ್ತಿಕ್ ಸುಬ್ಬರಾಜ್ ಕಾಂಬಿನೇಷನ್‌ನ ಮೊದಲ ಸಿನಿಮಾ ಎಂಬ ಕಾರಣಕ್ಕೂ ʻರೆಟ್ರೋʼ ಸಿನಿಮಾ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ನಿರ್ಮಾಪಕನ ಜತೆಗಿನ ʻಆ ಕರಾಳ ಅನುಭವʼದ...