Bengaluru, ಫೆಬ್ರವರಿ 13 -- Rakshak Bullet: ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಬುಲೆಟ್, ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಗಿಂತ ಟೀಕೆಗಳನ್ನೇ ಹೆಚ್ಚು ಎದುರಿಸಿದವರು. ಇಂದಿಗೂ ಅವರ ಪ್ರತಿ ಪೋಸ್ಟ್‌ಗಳಿಗೆ ನೆಗೆಟಿವ್‌ ಕಾಮೆಂಟ್‌ಗಳೇ ಬಂದಿದ್ದೇ ಹೆಚ್ಚು. ಇದೀಗ ತಮ್ಮ ಒಂದು ನಿರ್ಧಾರದಿಂದ ಜನರ ಮೆಚ್ಚುಗೆ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಬೆಟ್ಟಿಂಗ್‌ ಆಪ್‌ ಪ್ರಚಾರ ಮಾಡುವುದಕ್ಕೆ ನೋ ಎನ್ನುವ ಮೂಲಕ ತಮ್ಮೊಳಗಿನ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದಾರವರು. ರಕ್ಷಕ್‌ ಅವರ ಈ ನಿರ್ಧಾರಕ್ಕೆ ನೆಟ್ಟಿಗ ವಲಯದಿಂದಲೂ ಮೆಚ್ಚುಗೆಯೂ ವ್ಯಕ್ತವಾಗಿದೆ.

ಅಪ್ಪನಂತೆ ರಕ್ಷಕ್‌ ಬುಲೆಟ್‌ ಸಹ ನಟನಾಗಬೇಕು ಅನ್ನೋ ಆಸೆಯನ್ನಿಟ್ಟುಕೊಂಡವರು. ಅದರಂತೆ, ಗುರುಶಿಷ್ಯರು ಸಿನಿಮಾದಲ್ಲಿ ಸಣ್ಣಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ನಾಯಕನಾಗಿಯೂ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಕೆಲಸಗಳ ಜತೆಗೆ ರಿಯಾಲಿಟಿ ಶೋಗಳಲ್ಲೂ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಕಳೆದ ವರ್ಷದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್...