ಭಾರತ, ಮೇ 14 -- ಇತ್ತೀಚೆಗೆ ಇಹಲೋಕ ತ್ಯಜಿಸಿದ ನಗುವಿನ ಸರದಾರ, ಕಾಮಿಡಿ ಕಿಲಾಡಿ ರಾಕೇಶ್‌ ಪೂಜಾರಿ ಸಾವು ಹಲವರನ್ನು ದಿಗ್ಭ್ರಮೆಗೊಳಿಸಿದೆ. ಆರೋಗ್ಯವಂತನಾಗಿಯೇ ಇದ್ದ ರಾಕೇಶ್‌ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪುತ್ತಾರೆ. ಅವರಿಗೆ ಬಿಪಿ ಲೋ ಆಗಿತ್ತು, ನಂತರ ಹೃದಯಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಹಾಗಾದರೆ ಲೋ ಬಿಪಿ ಅಷ್ಟೊಂದು ಅಪಾಯಕಾರಿಯೇ, ರಕ್ತದೊತ್ತಡ ಕಡಿಮೆಯಾದ್ರೆ ಪ್ರಾಣಕ್ಕೂ ಸಂಚು ಬರುತ್ತಾ, ಏನಿದು ರಕ್ತದೊತ್ತಡ, ಇದರ ರೋಗಲಕ್ಷಣಗಳು, ಮುನ್ನೆಚ್ಚರಿಕೆ ಹೇಗೆ, ಇಲ್ಲಿದೆ ಮಾಹಿತಿ.

ಕಡಿಮೆ ರಕ್ತದೊತ್ತಡ ಅಥವಾ ಲೋ ಬ್ಲಡ್‌ ಪ್ರೆಶರ್‌ ಎಂದರೆ ಅಪಧಮನಿಯ ಗೋಡೆಗಳ ವಿರುದ್ಧ ರಕ್ತವನ್ನು ಪಂಪ್‌ ಮಾಡುವ ಸಾಮರ್ಥ್ಯ ಕಡಿಮೆ ಇರುವ ಸ್ಥಿತಿ. ಇದನ್ನು ಹೈಪೊಟೆನ್ಷನ್‌ ಎಂದೂ ಕೂಡ ಕರೆಯುತ್ತಾರೆ. ರಕ್ತದೊತ್ತಡವನ್ನು ಮಿಲಿಮೀಟರ್ ಪಾದರಸದಲ್ಲಿ (mm Hg) ಅಳೆಯಲಾಗುತ್ತದೆ. 90/60 mm Hg ಗಿಂತ ಕಡಿಮೆಯಿರುವ ಸ್ಥಿತಿಯನ್ನು ಕಡಿಮೆ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ರಕ್ತದೊತ್ತಡ ಕಡಿಮೆ ಆದರೆ ಯಾವುದೇ ನಿರ್ದಿಷ್ಟ ರೋಗಲಕ...