ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಓವರ್ ಮುಗಿಸಿ ಬೌಂಡರಿ ಗೆರೆ ಬಳಿ ಭಾರತದ ವೇಗಿ ಮೊಹಮ್ಮದ್ ಶಮಿ ಸೇವಿಸಿದ ಎನರ್ಜಿ ಡ್ರಿಂಕ್ ಭಾರಿ ವಿವಾದ ಸೃಷ್ಟಿಸಿತ್ತು. ಪವಿತ್ರ ರಂಜಾನ್ ಉಪವಾಸ ಆಚರಿಸದೆ ಇಸ್ಲಾಂ ಧರ್ಮಕ್ಕೆ ಅನ್ಯಾಯ ಮಾಡಿದ್ದಾರೆ. ಅವರು ಅಪರಾಧಿ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಟೀಕಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಶಮಿಗೆ ಸಾಕಷ್ಟು ಬೆಂಬಲವೂ ವ್ಯಕ್ತವಾಗಿತ್ತು. ಅದರಂತೆ ಕವಿ, ಗೀತೆ ರಚನೆಕಾರ ಜಾವೇದ್ ಅಖ್ತರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಶಮಿ ಕ್ಷಮೆ ಕೋರಿದ್ದಾರೆ ಎನ್ನಲಾದ ವಿಡಿಯೋ ಕೂಡ ವೈರಲ್ ಆಗಿದೆ. ಆದರೆ ಅಸಲಿ ಸತ್ಯ ಬೇರೆಯೇ ಇದೆ.

ಶಮಿ ಅವರಿಗೆ ಕವಿ ಮತ್ತು ಗೀತೆ ರಚನೆಕಾರ ಜಾವೇದ್ ಅಖ್ತರ್ ಬೆಂಬಲ ನೀಡಿದ್ದು, ತನ್ನನ್ನು ಟೀಕಿಸಿದವರ ಹೇಳಿಕೆಗಳನ್ನು ನಿರ್ಲಕ್ಷಿಸುವಂತೆ ಅಖ್ತರ್ ಒತ್ತಾಯಿಸಿದ್ದಾರೆ. 'ಶಮಿ ಸಾ...