ಭಾರತ, ಮಾರ್ಚ್ 6 -- ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್​ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಎನರ್ಜಿ ಡ್ರಿಂಕ್ ಸೇವಿಸಿದ್ದಕ್ಕೆ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮುಸ್ಲಿಂ ಧರ್ಮ ಗುರುವೊಬ್ಬರ ವಿರುದ್ಧವೇ ಇದೀಗ ಟೀಕೆ ವ್ಯಕ್ತವಾಗಿದೆ. ರಂಜಾನ್ ಉಪವಾಸ (ರೋಜಾ) ಆಚರಿಸದ ಶಮಿ ಅವರನ್ನು ಹಿರಿಯ ಮುಸ್ಲಿಂ ಧರ್ಮಗುರು ಹಾಗೂ ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಕಟುವಾಗಿ ಟೀಕಿಸಿದ್ದು, ಅಪರಾಧಿ ಎಂದು ಜರೆದಿದ್ದಾರೆ. ಟೀಕೆಯ ನಡುವೆಯೂ ಅವರು ತಮ್ಮ ಪ್ರದರ್ಶನದಿಂದ ಪ್ರಶಂಸೆಗೆ ಒಳಗಾಗಿದ್ದಾರೆ.

ಪವಿತ್ರ ರಂಜಾನ್ ಆಚರಣೆ ಮಾಡುವುದು ಇಸ್ಲಾಂ ಧರ್ಮದ ಕರ್ತವ್ಯವಾಗಿದೆ. ಆರೋಗ್ಯವಂತ ಪುರುಷ ಅಥವಾ ಮಹಿಳೆಯರು ರೋಜಾವನ್ನು ಆಚರಿಸದಿದ್ದರೆ ಅವರು ಅಪರಾಧಿಗಳಾಗುತ್ತಾರೆ. ಅದು ಪಾಪ ಮತ್ತು ಧಾರ್ಮಿಕ ತತ್ವಗಳಿಗೆ ವಿರುದ್ಧವಾಗಿದೆ. ಯಾರಾದರೂ ಉದ್ದೇಶಪೂರ್ವಕವಾಗಿ ಉಪವಾಸ ತಪ್ಪಿಸಿದರೆ ಅವರು ಪಾಪಿಗಳು. ಕ್ರಿಕೆಟಿಗ ...