ಭಾರತ, ಮಾರ್ಚ್ 25 -- Diabetes and Ramadan Fasting: ರಂಜಾನ್ ತಿಂಗಳಲ್ಲಿ ವಿಶ್ವದಾದ್ಯಂತ ಲಕ್ಷಾಂತರ ಜನರು ಉಪವಾಸ ಮಾಡುತ್ತಾರೆ. ಆಧ್ಯಾತ್ಮಿಕ ಚಿಂತನೆ, ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ. ರಂಜಾನ್ ಮಾಸವನ್ನು ಪವಿತ್ರ ಮಾಸ ಎಂದೇ ಕರೆಯಲಾಗುತ್ತದೆ. ಆದರೆ ಈ ಅವಧಿಯು ಮಧುಮೇಹ ಇರುವವರಿಗೆ ಕೊಂಚ ಸವಾಲಿನದ್ದಾಗಿದೆ. ಈ ಸಂದರ್ಭದಲ್ಲಿ ಮಧುಮೇಹಿಗಳು ಆರೋಗ್ಯವನ್ನು ಕಾಪಾಡಿಕೊಂಡು, ಧಾರ್ಮಿಕ ಆಚರಣೆಯಲ್ಲಿ ತೊಡಗಿಕೊಳ್ಳಬೇಕು ಎಂದರೆ ಸೂಕ್ತ ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಸರಿಯಾದ ಕ್ರಮ ಪಾಲನೆಯ ಮೂಲಕ ಸುರಕ್ಷಿತವಾಗಿ ಉಪವಾಸ ಕೈಗೊಳ್ಳಬೇಕು.

ಮಧುಮೇಹ ಇರುವವರು ಸೂರ್ಯೋದಯ ಸಮಯದಲ್ಲಿ ಸುಹೂರ್‌ನಿಂದ ಹಿಡಿದು ಸೂರ್ಯಾಸ್ತ ಸಮಯದ ಇಫ್ತಾರ್‌ವರೆಗೆ ಉಪವಾಸ ಕೈಗೊಳ್ಳುವಾಗ ತಮ್ಮ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಸಮತೋಲಿತದಲ್ಲಿರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಈ ಅವಧಿಯಲ್ಲಿ ಸಕ್ಕರೆಯ ಅಂಶದಲ್ಲಿ ಏರುಪೇರಾಗಬಹುದು. ಅದರಿಂದ ಸಮಸ್ಯೆ ತಲೆದೋರಬಹುದು. ಸೂಕ್ತವಾದ ಆಹಾರ ಸೇವನೆ, ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು...