ಭಾರತ, ಫೆಬ್ರವರಿ 5 -- ಬೆಂಗಳೂರು: 'ಯೋಗಿ ಅರವಿಂದರೆಂಬ ತೈಲ, ಅಧ್ಯಾತ್ಮವೆಂಬ ಬೆಳಕಿನಿಂದ ದ.ರಾ. ಬೇಂದ್ರೆಯವರು ತಮ್ಮ ಕಾವ್ಯವನ್ನು ಬೆಳಗಿಸಿಕೊಂಡರು. ಅರವಿಂದರನ್ನು ಭೇಟಿಯಾದ ನಂತರ ಬೇಂದ್ರೆಯವರ ಜೀವನ ಹಾಗೂ ಕಾವ್ಯವು ಹೊಸ ದಿಕ್ಕಿನತ್ತ ಹೊರಳಿತು' ಎಂದು ಕವಿ, ಸಾಹಿತಿ ಡಾ ಜಿ.ಬಿ. ಹರೀಶ ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ 'ನಾಕುತಂತಿ' ಕವನ ಸಂಕಲನದ ಷಷ್ಟಿಪೂರ್ತಿ ನಿಮಿತ್ತ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೇಂದ್ರೆ ಕವಿತೆಗಳಿಗೆ ಅಪಾರವಾದ ಟೀಕೆ, ಬೆರಗು ಹಾಗೂ ದೇಶಾವರಿ ಮೆಚ್ಚುಗೆ ಸಿಕ್ಕಿದೆ. ಆದರೆ ಅವಕ್ಕೆ ಸಿಗಬೇಕಿದ್ದಷ್ಟು ವಿಮರ್ಶೆ, ಪ್ರೋತ್ಸಾಹ, ವ್ಯಾಖ್ಯಾನ ಸಿಕ್ಕಿಲ್ಲ. ನಮಗೆ ಯಾರಾದರೂ ಹೆಚ್ಚು ತಿಳಿದಷ್ಟೂ ಸಲಿಗೆ ಬೆಳೆಯುವಂತೆ ಬಹುಶಃ ಬೇಂದ್ರೆಯವರ ಸಂದರ್ಭದಲ್ಲೂ ಆಗಿರಬಹುದು. ಆರಂಭದ ಹಂತದಲ್ಲಿ ಬೇಂದ್ರೆಯವರು ಖಲೀಲ್ ಗಿ...