Bengaluru, ಏಪ್ರಿಲ್ 20 -- ವಿಭಿನ್ನ ಕಥಾಹಂದರ ಹೊಂದಿರುವ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಏಪ್ರಿಲ್ 25ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಮೊದಲು 'ಭಾವಚಿತ್ರ' ಎಂಬ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಕುಮಾರ್ ಮೂರನೇ ಪ್ರಯತ್ನವಾಗಿ ʻಗ್ಯಾಂಗ್‌ಸ್ಟರ್ ಅಲ್ಲ ಫ್ರಾಂಕ್‌ಸ್ಟರ್ʼ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುವ ಜೊತೆಗೆ ನಾಯಕನಾಗಿಯೂ ನಟನೆ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಉಗ್ರಂ ಖ್ಯಾತಿಯ ತಿಲಕ್ ಶೇಖರ್ ಅಭಿನಯಿಸಿದ್ದಾರೆ. ವುಡ್‌ ಕ್ರೀಪರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಕಮ್ ನಟ ಗಿರೀಶ್ ಕುಮಾರ್ 'ನಮ್ಮ ಚಿತ್ರವನ್ನು ನೋಡಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ಯೂಟ್ಯೂಬರ್ ಕಥೆಯಾಗಿದ್ದು, ಫ್ರಾಂಕ್ ವಿಡಿಯೋ ಮಾಡಿಕೊಂಡು ಇರುವವನ ಸಿನಿಮಾ. ಜೊತೆಗೆ ಇದೊಂದು ಆ್ಯಕ್ಷನ್, ಕಾಮಿಡಿ ಚಿತ್ರ ಕೂಡ. ಇದರಲ್ಲಿ ನಾನು ಫ್ರಾಂಕ್‌ಸ್ಟರ್ ಆಗಿದ್ರೆ ...