ಭಾರತ, ಮಾರ್ಚ್ 3 -- ಬೆತ್​ ಮೂನಿ (96*) ಮತ್ತು ಬೌಲರ್​​ಗಳ ಮಾರಕ ಬೌಲಿಂಗ್ ಬಲದಿಂದ ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 81 ರನ್​ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ತನ್ನ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲುಂಡ ಯುಪಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಿಂದ ಕೊನೆಯ ಸ್ಥಾನಕ್ಕೆ ಕುಸಿದಿದೆ. ಗೆದ್ದ ಗುಜರಾತ್ 5ನೇ ಸ್ಥಾನದಿಂದ 2ಕ್ಕೆ ಜಿಗಿತ ಕಂಡಿದ್ದು, ಪ್ಲೇಆಫ್​ ಪ್ರವೇಶಿಸಲು ಸ್ಥಾನ ಭದ್ರಪಡಿಸುತ್ತಿದೆ.

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಬೆತ್ ಮೂನಿ (96*) ಮತ್ತು ಹರ್ಲೀನ್ ಡಿಯೋಲ್​ (45) ಅವರ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್​ಗಳ ಬೃಹತ್ ಮೊತ್ತ ಪೇರಿತು. ಈ ದೊಡ್ಡ ಗುರಿ ಬೆನ್ನಟ್ಟುವಾಗ ಜಿಜಿ ಬೌಲರ್​ಗಳ ದಾಳಿಗೆ ನಲುಗಿದ ಯುಪಿ, 17.1 ಓವರ್​ಗಳಿಗೆ 105 ರನ್​ಗೆ ಆಲೌಟ್​ ಆಯಿತು. ವಾರಿಯರ್ಸ್​​ಗೆ ಇದು 4ನೇ ಸೋಲು. ಜಿಜಿಗೆ 3ನೇ ಗೆಲುವು.

187 ರನ್​ಗಳ ಗುರಿ ಬೆನ...