ಭಾರತ, ಏಪ್ರಿಲ್ 22 -- ಯುಪಿಎಸ್‌ಸಿ 2024ರ ಫಲಿತಾಂಶ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತಾನು 2024ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಇಂದು (ಏಪ್ರಿಲ್ 22) ಪ್ರಕಟಿಸಿದೆ. ಯುಪಿಎಸ್‌ಸಿ 2024ರ ಅಂತಿಮ ಫಲಿತಾಂಶವು ಕೇಂದ್ರೀಯ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ನಲ್ಲಿ ಲಭ್ಯವಿದೆ.

ನಾಗರಿಕ ಸೇವಾ ಪರೀಕ್ಷಾರ್ಥಿಗಳ ಪೈಕಿ 2845 ಅಭ್ಯರ್ಥಿಗಳಿಗೆ ಪರ್ಸನಾಲಿಟಿ ಟೆಸ್ಟ್ ಅಥವಾ ಸಂದರ್ಶನ ಜನವರಿ 7 ರಿಂದ ಏಪ್ರಿಲ್ 17 ರ ನಡುವೆ ಎರಡು ಸೆಷನ್‌ಗಳಲ್ಲಿ ನಡೆಯಿತು. ಮೊದಲ ಸೆಷನ್‌ ಬೆಳಿಗ್ಗೆ 9 ರಿಂದ, ಎರಡನೇ ಸೆಷನ್ ಅಪರಾಹ್ನ 1 ಗಂಟೆಯಿಂದ ನಡೆಯಿತು. ಈ ಯುಪಿಎಸ್‌ಸಿ ಮೇನ್ಸ್‌ ಬರೆದು ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ಹಂತದಲ್ಲಿ ಅವಕಾಶ ನೀಡಲಾಗಿತ್ತು.

ಕೇಂದ್ರೀಯ ಲೋಕಸೇವಾ ಆಯೋಗವು 2024ರ ಸೆಪ್ಟೆಂಬರ್ 20,21,22, 28 ಮತ್ತು 29ರಂದು ನಾಗರಿಕ ಸೇವಾ ಮುಖ್ಯ ಪರೀಕ್ಷೆ (ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಮೇನ್ಸ್ ಪರೀಕ್ಷೆ) ನಡೆಸಿತ್ತು. ಈ ಪರೀಕ್ಷೆಯು ನಿಗದಿತ ದಿನಾಂಕಗ...