ಭಾರತ, ಮೇ 24 -- ಬೆಂಗಳೂರು: ನಾಳೆ (ಮೇ 25) ದೇಶದಾದ್ಯಂತ ಯುಪಿಎಸ್‌ಸಿ (ಪ್ರಿಲಿಮ್ಸ್) ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನೆರವಾಗಲೆಂದು ನಮ್ಮ ಮೆಟ್ರೊ ಬೆಳಿಗ್ಗೆ 1 ಗಂಟೆ ಮುಂಚಿತವಾಗಿ ಓಡಾಟ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಮೆಟ್ರೊ ರೈಲು ಸಂಚಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗುತ್ತದೆ. ಆದರೆ ನಾಳೆ ಯುಪಿಎಸ್‌ಸಿ ಪರೀಕ್ಷೆ ಇರುವ ಕಾರಣ ಬೆಳಿಗ್ಗೆ 6 ರಿಂದಲೇ ಪ್ರಮುಖ 4 ಟರ್ಮಿನಲ್‌ಗಳಾದ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ಮಾದಾವರ ಹಾಗೂ ರೇಷ್ಮೆ ಸಂಸ್ಥೆಗಳಿಂದ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ.
ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ನಮ್ಮ ಮೆಟ್ರೊವನ್ನು ಸೇವೆಯನ್ನು ಬಳಸಲಿಕೊಳ್ಳಬಹುದು.
ಯುಪಿಎಸ್‌ಸಿ ಪರೀಕ್ಷೆ ನಾಳೆ ದೇಶದ ಒಟ್ಟು 80 ಪರೀಕ್ಷೆ ಕೇಂದ್ರಗಳಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.