ಭಾರತ, ಫೆಬ್ರವರಿ 9 -- ಕೇಂದ್ರ ಲೋಕಸೇವಾ ಆಯೋಗ (UPSC) 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಯಾದ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಯುಪಿಎಸ್‌ಸಿ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ 2025ರ ನೋಂದಣಿ ಮಾಡಿಕೊಳ್ಳಲು ಇದೀಗ ಫೆಬ್ರುವರಿ 18 (ಮಂಗಳವಾರ) ರವರೆಗೆ ಅವಕಾಶವಿದೆ. ಸಿಎಸ್ (ಪಿ) ಮತ್ತು ಐಎಫ್ಒಎಸ್ (ಪಿ) 2025ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಸದ್ಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆಬ್ರುವರಿ 18ರವರೆಗೆ ವಿಸ್ತರಿಸಲಾಗಿದೆ. ಅದರ ಬೆನ್ನಲ್ಲೇ ತಿದ್ದುಪಡಿ ವಿಂಡೋ ಫೆಬ್ರುವರಿ 19ರಂದು ತೆರೆಯಲಾಗುತ್ತಿದ್ದು, ಫೆಬ್ರುವರಿ 25ರಂದು ಕೊನೆಗೊಳ್ಳಲಿದೆ

ಸಿಎಸ್ (ಪಿ) -2025 ಮತ್ತು ಐಎಫ್ಒಎಸ್ (ಪಿ) 2025ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆ. 18ರ ಸಂಜೆ 06 ಗಂಟೆಯವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ, 7 ದಿನಗಳ ತಿದ್ದುಪಡಿ ವಿಂಡೋ, ಅರ್ಜಿ ಸಲ್ಲಿಕೆ ಅವಧಿ ಮುಗಿದ ಮರುದಿನದ...