Bangalore, ಏಪ್ರಿಲ್ 22 -- ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆ 2024 ರ ಫಲಿತಾಂಶ ಪ್ರಕಟವಾಗಿದ್ದು ಕರ್ನಾಟಕದಿಂದಲೂ ಹಲವರು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇದರಲ್ಲಿ ಆರ್. ರಂಗ ಮಂಜು - 24, ಡಾ.ಸಚಿನ್‌ ಬಸವರಾಜ್ ಗುತ್ತೂರ್​ - 41, ಬಿಎಂ ಮೇಘನಾ - 425, ಭರತ್ ಸಿ ಯಾರಂ - 567, ಡಾ. ಭಾನುಪ್ರಕಾಶ್ - 523, ನಿಖಿಲ್ ಎಂಆರ್- 724, ಟಿ. ವಿಜಯ್ ಕುಮಾರ್ - 894, ಹನುಮಂತಪ್ಪ ನಂದಿ - 910, ಮೋಹನ್ ಪಾಟೀಲ್ - 984 ರ‍್ಯಾಂಕ್ ಗಳಿಸಿದವರು. ಇದಲ್ಲದೇ ಇನ್ನೂ ಹಲವರು ಈ ಪಟ್ಟಿಯಲ್ಲಿದ್ದಾರೆ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಪರೀಕ್ಷೆಗೆ ತಯಾರಿ ಮಾಡಿದವರೂ ಕೂಡ ಹಲವರು ಉತ್ತಮ ರ‍್ಯಾಂಕ್ ಗಳಿಸಿಕೊಂಡಿದ್ದಾರೆ.

ಕಳೆದ ವರ್ಷ ನಡೆದಿದ್ದ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದಲೂ ಹಲವರು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ ಬೆಂಗಳೂರಿನ ಇನ್ಸ್‌ಸೈಟ್ಸ್‌ ಐಎಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಹೆಚ್ಚಿನ ಅಭ್ಯರ್ಥಿಗಳು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಆರ್.ರಂಗಮಂಜು 24ನೇ ರ...