Mandya, ಏಪ್ರಿಲ್ 23 -- ಭಾರತೀಯರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ, ಯುವಕ/ ಯುವತಿಯರಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಯಾಗಬೇಕೆಂಬ ಮಹಾಕನಸು ಇದ್ದೇ ಇರುತ್ತದೆ. ಆದರೆ ಅದರಲ್ಲಿ ಯಶಸ್ವಿಯಾಗುವುದು ಅಷ್ಟು ಸುಲಭವಲ್ಲ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎನ್ನಿಸಿದೆ. ಈ ಬಾರಿಯೂ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಹಲವಾರು ಸಾಧಕರು ಯಶಸ್ವಿಯೂ ಆಗಿದ್ಧಾರೆ. ದಶಕದ ಹಿಂದೆ ಕರ್ನಾಟಕದ ಕೋಲಾರದವರಾದ ಕೆ.ಆರ್.ನಂದಿನಿ ಅವರು ಸತತ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದರು. ಇದರಿಂದ ಕರ್ನಾಟಕ ಕೇಡರ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕೆ.ಆರ್.ನಂದಿನಿ ಪರೀಕ್ಷೆ ಎದುರಿಸುವುದು ಸುಲಭ. ಆದರೆ ತಯಾರಿಯೇ ಬಲು ಕಷ್ಟ. ನಿಮ್ಮ ತಯಾರಿ ಹೇಗೆ ಇರುತ್ತದೆಯೋ ಅದೇ ರೀತಿ ಫಲಿತಾಂಶ ಬರುತ್ತದೆ ಎಂದು ಸಲಹೆ ನೀಡುತ್ತಾರೆ.

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವ...