ಭಾರತ, ಫೆಬ್ರವರಿ 7 -- Fighter Pilot In The Indian Air Force: ಏರೋ ಇಂಡಿಯಾ 2025 ಫೆಬ್ರವರಿ 10ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಹಲವು ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿವೆ. ಆಕಾಶದಲ್ಲಿ ಲೋಹದ ಹಕ್ಕಿಗಳನ್ನು ನೋಡುತ್ತಿರುವಾಗ ಸಾಕಷ್ಟು ಯುವ ಜನರು ತಾವು ಕೂಡ ವಾಯುಪಡೆಯ ಯುದ್ಧ ವಿಮಾನಗಳ ಪೈಲಟ್‌ ಆಗಬೇಕು? ಹಕ್ಕಿಯಂತೆ ಯುದ್ಧವಿಮಾನ ಮುನ್ನಡೆಸಬೇಕು ಎಂದೆಲ್ಲ ಕನಸು ಕಾಣುತ್ತಿರಬಹುದು. ವಾಯುಪಡೆಯ ಯುದ್ಧ ವಿಮಾನಗಳಲ್ಲಿ ಪೈಲಟ್‌ ಆಗುವುದು ಹೇಗೆ ಎಂದು ತಿಳಿಯೋಣ ಬನ್ನಿ.‌

ಆಕಾಶದೆತ್ತರದಲ್ಲಿ ಹಾರುವ ಜೊತೆಗೆ ದೇಶ ರಕ್ಷಣೆಯನ್ನೂ ಮಾಡಬೇಕು ಎನ್ನುವ ಕನಸು ನಿಮ್ಮದಾದರೆ ನೀವು ವಾಯುಪಡೆಗೆ ಸೇರಬೇಕು. ಭಾರತೀಯ ವಾಯುಪಡೆಯಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಬೇಡಿಕೆಯ ಹುದ್ದೆಗಳಲ್ಲಿ ಪೈಲಟ್ ಹುದ್ದೆಯು ಪ್ರಮುಖವಾಗಿದೆ. ಇದಕ್ಕೆ ಸೇರಲು ಕೆಲವೊಂದು ಅರ್ಹತಾ ಮಾನದಂಡಗಳಿವೆ. ಭಾರತೀಯ ವಾಯುಪಡೆಯು ವಿವಿಧ ರೀತಿಯ ಆಯ್ಕೆ ವಿಧಾನದ ಮೂಲಕ ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಅತ್ಯುತ್ತಮ ಶೈಕ್ಷ...