Bengaluru, ಮೇ 10 -- ನವದೆಹಲಿ: ಭಾರತದ ವಿರುದ್ಧ ಉಗ್ರವಾದ ಮತ್ತು ಕಾಲು ಕೆರೆದು ಯುದ್ಧಕ್ಕೆ ಬರುತ್ತಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 1 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿದೆ. ಆದರೂ ಐಎಂಎಫ್ ಕಾರ್ಯನಿರ್ವಾಹಕ ಮಂಡಳಿಯು ತನ್ನ 7 ಬಿಲಿಯನ್ ಡಾಲರ್ ನೆರವಿನ ಪೈಕಿ ಮೊದಲ ಕಂತಿನಲ್ಲಿ 1 ಬಿಲಿಯನ್ ಡಾಲರ್ (85,42,48,90,600 ರೂ.) ನೆರವು ಬಿಡುಗಡೆ ಮಾಡಿದೆ.

ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ 1 ಬಿಲಿಯನ್ ಡಾಲರ್ ಮೊದಲ ಕಂತನ್ನು ಅನುಮೋದಿಸಿದ ಬಗ್ಗೆ ಪ್ರಧಾನಿ ಮುಹಮ್ಮದ್ ಶೆಹಬಾಜ್ ಷರೀಫ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಐಎಂಎಫ್‌ ಇತ್ತೀಚಿನ ಅನುಮೋದನೆಯು 7 ಬಿಲಿಯನ್ ಡಾಲರ್ ನೆರವು ಯೋಜನೆಯಲ್ಲಿ ಈಗಾಗಲೇ 2 ಬಿಲಿಯನ್ ಡಾಲರ್ ನೆರವು ಪಾಕಿಸ್ತಾನಕ್ಕೆ ಲಭ್ಯವಾಗಿದೆ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ...