ಭಾರತ, ಏಪ್ರಿಲ್ 19 -- ಯುದ್ಧಕಾಂಡ ಸಿನಿಮಾ ವಿಮರ್ಶೆ: ಕಮರ್ಷಿಯಲ್‍ ಹೀರೋಗಳು ತಮ್ಮ ಚೌಕಟ್ಟು ಬಿಟ್ಟು ಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪ ಕನ್ನಡದ ಹಲವು ಹೀರೋಗಳ ಮೇಲೆ ಇದೆ. ಈ ಪೈಕಿ ಅಜೇಯ್‍ ರಾವ್ ಸಹ ಒಬ್ಬರು. ಇದಕ್ಕೂ ಮೊದಲು ಅಜೇಯ್ ಹೆಚ್ಚು ಪ್ರಯೋಗಗಳನ್ನೇನೂ ಮಾಡಿರಲಿಲ್ಲ. ಈಗ 'ಯುದ್ಧಕಾಂಡ' ಚಿತ್ರದ ಮೂಲಕ ಅಜೇಯ್ ತಮ್ಮ ಚೌಕಟ್ಟು ಬಿಟ್ಟು ಹೊಸ ಪ್ರಯೋಗ ಮತ್ತು ಪ್ರಯತ್ನವನ್ನು ಮಾಡಿದ್ದಾರೆ.

ಕಾನೂನಿನಲ್ಲಿ ಪದವಿ ಪಡೆದು ಸಣ್ಣಪುಟ್ಟ ಕೇಸ್‍ಗಳನ್ನು ನೋಡಿಕೊಂಡಿರುವ ಭರತ್‍ಗೆ (ಅಜೇಯ್‍ ರಾವ್‍) ದೊಡ್ಡದೊಂದು ಕೇಸ್‍ ಗೆಲ್ಲಬೇಕು ಎಂದು ಆಸೆ ಪಡುತ್ತಿರುತ್ತಾನೆ. ಹೀಗಿರುವಾಗಲೇ, ಒಮ್ಮೆ ಕೋರ್ಟ್ ಆವರಣದಲ್ಲಿ ನಿವೇದಿತಾ (ಅರ್ಚನಾ ಜೋಯಿಸ್), ಶಾಸಕನೊಬ್ಬನ ತಮ್ಮನನ್ನು ಬಹಿರಂಗವಾಗಿ ಗುಂಡಿಟ್ಟು ಕೊಲ್ಲುತ್ತಾಳೆ. ಸಾರ್ವಜನಿಕವಾಗಿ ನಡೆದ ಹತ್ಯೆ ಸಾಕಷ್ಟು ಸುದ್ದಿಯಾಗುತ್ತದೆ. ಆಕೆಗೆ ಶಿಕ್ಷೆಯಾಗಬೇಕು ಎಂದು ಎಂ.ಎಲ್‍.ಎ ಕಡೆಯವರು ದೊಡ್ಡ ಪ್ರಯತ್ನ ನಡೆಸುತ್ತಾರೆ. ಅದಕ್ಕಾಗಿ ಮೂರು ಕೋಟಿ ರೂ. ಕೊಟ್ಟು ರಾ...