ಭಾರತ, ಏಪ್ರಿಲ್ 9 -- ಸಿನಿಮಾ ಮಾಡುವುದು ಹಲವರ ಕನಸು, ಹಾಗಂತ ಇದು ಖಂಡಿತ ಸುಲಭದ ಹಾದಿಯಲ್ಲ. ಇದಕ್ಕಾಗಿ ಸಾಕಷ್ಟು ತ್ಯಾಗ, ಪರಿಶ್ರಮ ಅವಶ್ಯವಾಗುತ್ತದೆ. ಸಿನಿಮಾ ನಿರ್ಮಾಣ ಮಾಡುವ ಸಲುವಾಗಿ ಮನೆ-ಮಠ ಮಾರಿಕೊಂಡವರು ನಮ್ಮ ನಡುವೆ ಹಲವರಿದ್ದಾರೆ. ಇದೀಗ ನಟ ಅಜೇಯ್ ರಾವ್ ತಮ್ಮ ಮುಂದಿನ ಯುದ್ಧಕಾಂಡ ಸಿನಿಮಾಕ್ಕಾಗಿ ನೆಚ್ಚಿನ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದಾರೆ. ಈ ಸಂದರ್ಭ ಅವರ ಮಗಳು ಬಿಕ್ಕಿ ಬಿಕ್ಕ ಅಳುತ್ತಿರುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಯುದ್ಧಕಾಂಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಸ್ವತಂ ಅಜೇಯ್ ರಾವ್. ಈ ಸಿನಿಮಾದ ನಾಯಕನೂ ಅವರೇ. ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಜೇಯ್. ಚಿತ್ರ ನಿರ್ಮಾಣಕ್ಕಾಗಿ ತಾವು ಪಟ್ಟ ಕಷ್ಟಗಳು, ಅನುಭವಿಸಿದ ಸಂಕಷ್ಟಗಳನ್ನೆಲ್ಲಾ ಯುಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಎಕ್ಸ್‌ಕ್ಯೂಸ್ ಮೀ ಖ್ಯಾತಿಯ ನಟ. ಈ ಸಿನಿಮಾವು ಏಪ್ರಿಲ್ 18ರಂದು ತೆರೆ ಕಾಣಲಿದೆ....
Click here to read full article from source
To read the full article or to get the complete feed from this publication, please
Contact Us.