ಭಾರತ, ಏಪ್ರಿಲ್ 12 -- Yuddha Kanda Movie Ajay Rao: ಕನ್ನಡದ ಸಿನಿಮಾ ಪತ್ರಕರ್ತರಾದ ಬಿ ಗಣಪತಿ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯುದ್ಧಕಾಂಡ ನಟ ಅಜಯ್‌ ರಾವ್‌ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ನಿಮ್ಮ ಸಿನಿಮಾದಲ್ಲಿ ಫೈಟಿಂಗ್‌ ಇದೆಯಾ? ಸ್ವಿಮ್ಮಿಂಗ್‌ ಸೀನ್‌ ಇದೆಯಾ... ಇತ್ಯಾದಿಗಳನ್ನು ಕೇಳುತ್ತಾರೆ ಎಂದಿಟ್ಟುಕೊಳ್ಳಿ. ಇಷ್ಟೆಲ್ಲ ಸೀನ್‌ಗಳನ್ನು ಇಟ್ಟುಕೊಂಡ ಸಿನಿಮಾಗಳು ಏಕೆ ಸೋಲುತ್ತಿವೆ?. ಮಲಯಾಳಂ, ಒರಿಯಾ, ತಮಿಳು, ತೆಲುಗು ಸಿನಿಮಾಗಳಲ್ಲಿ ಜನರ ಅಭಿವ್ಯಕ್ತಿಗೆ ತಕ್ಕಂತೆ ಸಿನಿಮಾ ಮಾಡುವುದು ಹೆಚ್ಚಾಗಿದೆ. ಸಿನಿಮಾಗಳನ್ನು ನಾವೇ ಸೋಲಿಸ್ತೇವೆ ಅನಿಸ್ತಿಲ್ವಾ? ಆದರೆ, ನಿಮ್ಯುಮ ದ್ಧಕಾಂಡ ಸಿನಿಮಾದಲ್ಲಿ ಹೊಸ ಬದಲಾವಣೆ ಕಾಣಿಸುತ್ತಿದೆ." ಎಂದು ಬಿ ಗಣಪತಿ ಹೇಳಿದಾಗ ಅಜಯ್‌ ಕುಮಾರ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ.

"ನಾನು ಸಿನಿಮಾವನ್ನು ತೀರಾ ವೈಯಕ್ತಿಕವಾಗಿ ಮಾಡಿದ್ದೇನೆ. ನನಗೆ ಮಗಳಿದ್ದಾಳೆ. ಇದಕ್ಕಿಂತ ಪರ್ಸನಲ್‌ ಬೇಕಿಲ್ಲ. ಇವತ್ತು ಜನರ ಮನಸ್ಸಿನಲ್ಲಿಯೂ ಕೂತಿದೆ. ಸಿನಿಮಾ ತಯಾರಕರಲ್...