Bangalore, ಏಪ್ರಿಲ್ 29 -- ಬೆಂಗಳೂರು: ಯುಜಿ ಸಿಇಟಿ-25ರ ಪರೀಕ್ಷೆಗೆ ಅರ್ಜಿ ಸಲ್ಲಿಕೆ ವೇಳೆ ವಿಶೇಷ ಕ್ಯಾಟಗರಿಗಳ ಅಡಿ ಸೀಟು ಹಂಚಿಕೆಗೆ ಕ್ಲೇಮು ಮಾಡಿರುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಮೇ 5 ರಿಂದ 14ರೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಲ್ಲೇಶ್ವರಂ ಕಚೇರಿಗೆ ಖುದ್ದು ಸಲ್ಲಿಸಲು ಮಂಗಳವಾರ ಸೂಚಿಸಲಾಗಿದೆ. ಡಿಫೆನ್ಸ್, ಎಕ್ಸ್- ಡಿಫೆನ್ಸ್, ಸಿ ಎ ಪಿ ಎಫ್, ಸಿ ಆರ್ ಪಿ ಎಫ್, ಸಿಐಎಸ್ಎಫ್, ಬಿಎಸ್ಎಫ್, ಐಟಿಬಿಪಿ, ಎಕ್ಸ್-ಸಿ ಎ ಪಿ ಎಫ್, ಸ್ಕೌಟ್ಸ್ ಮತ್ತು ಗೈಡ್ಸ್, ಆಂಗ್ಲೋ ಇಂಡಿಯನ್ ಹಾಗೂ ಎನ್ ಸಿ ಸಿ ಕೋಟಾದಡಿ ಸೀಟು ಕ್ಲೇಮು ಮಾಡಿರುವ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ. ಕ್ರೀಡಾ ಕೋಟಾದಡಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಬಗ್ಗೆ ನಂತರದಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿ ಎ ಪಿ ಎಫ್/ಸಿಆರ್ ಪಿಎಫ್/ಸಿಐಎಸ್ಎಫ್/ಬಿಎಸ್ಎಫ್/ಐಟಿಬಿಪಿ ಕ್ಲೇಮು ಮಾಡಿರುವವರು ಮೇ 5ರಂದ...