ಭಾರತ, ಜುಲೈ 22 -- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಯುಜಿಸಿ ನೆಟ್ ಜೂನ್ ಫಲಿತಾಂಶ 2025 ಅನ್ನು ನಿನ್ನೆ (ಜುಲೈ 21, 2025) ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಯುಜಿಸಿ ನೆಟ್ ಜೂನ್ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ugcnet.nta.ac.in ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿರುವ ಫಲಿತಾಂಶಗಳನ್ನು ಪರಿಶೀಲಿಸಬಹುದು. ಪೋರ್ಟಲ್ ನಲ್ಲಿ ಲಾಗಿನ್ ಆಗಲು ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ.

ಯುಜಿಸಿ ನೆಟ್ ಜೂನ್ ಫಲಿತಾಂಶ 2025 ಸ್ಕೋರ್ ಕಾರ್ಡ್ ಪರಿಶೀಲಿಸಲು ಡೈರೆಕ್ಟ್ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ. ಯುಜಿಸಿ ನೆಟ್ ಜೂನ್ ಫಲಿತಾಂಶ 2025 ಅನ್ನು ಪರಿಶೀಲಿಸುವುದು ಹೇಗೆ, ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸಬೇಕು: ಅಧಿಕೃತ ವೆಬ್ ಸೈಟ್ ugcnet.nta.ac.in. ಈ ಲಿಂಕ್ ಓಪನ್ ಆದ ಬಳಿಕ ಲೇಟೆಸ್ಟ್ ನ್ಯೂಸ್ ಮುಂದೆ ತೋರಿಸಲಾಗುವ ಯುಜಿಸಿ ನೆಟ್ ಜೂನ್ 2025 ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ. ಬಳಿಕ ಅಗತ್ಯ ಮಾಹಿತಿಯನ್ನು ಸಲ್ಲಿಸುವ ಮೂಲಕ ನಿಮ್ಮ...