Bangalore, ಜುಲೈ 22 -- ಬೆಂಗಳೂರು: ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ( UGC) ಆಯೋಜಿಸಿದ್ದ ಜೂನ್ 2025 ರ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಒಟ್ಟು 1,88,333 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 5,269 ಅಭ್ಯರ್ಥಿಗಳು ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ಅರ್ಹತೆ ಪಡೆದುಕೊಂಡಿದ್ದಾರೆ. 54,885 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರು ಮತ್ತು ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. 1,28,179 ಅಭ್ಯರ್ಥಿಗಳು ಪಿಎಚ್‌ಡಿಗೆ ಮಾತ್ರ ಅರ್ಹತೆ ಪಡೆದಿದ್ದಾರೆ. ಫಲಿತಾಂಶವನ್ನು ಜುಲೈ 21, 2025 ರಂದು ಅಧಿಕೃತವಾಗಿ ಘೋಷಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 85 ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್‌ನಲ್ಲಿ ಪರೀಕ್ಷೆಯನ್ನು ನಡೆಸಿತ್ತು. ಇದನ್ನು ಜೂನ್ 25 ರಿಂದ ಜೂನ್ 29, 2025 ರವರೆಗೆ 285 ನಗರಗಳಲ್ಲಿ 10 ಶಿಫ್ಟ್‌ಗಳಲ್ಲಿ ಒಟ್ಟು 10,19,751 ನೋಂದಾಯಿತ ಅಭ್ಯರ್ಥಿಗಳಿಗೆ ನಡೆಸಲಾಯಿತು. ತಾತ್ಕಾಲಿಕ ಉತ್ತರ ಕೀಗಳು ಮತ್ತು ದಾಖಲಾದ ಪ್ರತ...