ಭಾರತ, ಮಾರ್ಚ್ 24 -- ಬೆಂಗಳೂರು: ಯುಗಾದಿ ಹಬ್ಬ ಎಂದರೆ ಬೇವು-ಬೆಲ್ಲದ ಜೊತೆ ಒಬ್ಬಟ್ಟು ಕೂಡ ಮಾಡಲೇಬೇಕು. ಒಬ್ಬಟ್ಟು ಇಲ್ಲದ ಯುಗಾದಿ ಹಬ್ಬ ಇರಲು ಸಾಧ್ಯವಿಲ್ಲ. ಈ ವರ್ಷ ಯುಗಾದಿ ಹಬ್ಬದ ಒಬ್ಬಟ್ಟಿನ ಸಿಹಿ ಹೆಚ್ಚಿಸುವ ಸಮಾಚಾರವೊಂದಿದೆ. ಅದೇನೆಂದರೆ ಎರಡು ವರ್ಷಗಳಿಗೆ ಹೋಲಿಸಿದರೆ ತೊಗಿರಬೇಳೆ ದರ ಭಾರಿ ಇಳಿಕೆ ಕಂಡಿದೆ. 2024ರ ಅಕ್ಟೋಬರ್‌ನಿಂದ ತೊಗರಿಬೇಳೆ ದರ ನಿರಂತರ ಇಳಿಕೆ ಕಾಣುತ್ತಿದ್ದು, ಈ ವಾರ ಐತಿಹಾಸಿಕ ಕನಿಷ್ಠ ಮಟ್ಟವನ್ನು ತಲುಪಿದೆ.

ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೊಗರಿ ಬೇಳೆಯ ಬೆಲೆ ಬ್ರ್ಯಾಂಡ್‌ಗೆ ಅನುಗುಣವಾಗಿ ಶೇ.57 ರಿಂದ ಶೇ.61 ರಷ್ಟು ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಕಡಲೆ ಬೇಳೆಯ ಬೆಲೆಯೂ ಸ್ವಲ್ಪ ಇಳಿಕೆಯಾಗಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಗ್ರಾಹಕರಲ್ಲಿ ಖುಷಿ ಮೂಡಲು ಕಾರಣವಾಗಿದೆ.

ಕಳೆದ ಬಿತ್ತನೆಯ ಸಮಯದಲ್ಲಿ ಮಳೆ ಚೆನ್ನಾಗಿ ಆದ ಕಾರಣ ಫಸಲು ಕೂಡ ಚೆನ್ನಾಗಿ ಬಂದಿತ್ತು. ಇದರಿಂದಾಗಿ ಇಳುವರಿಯೂ ಹೆಚ್ಚಾಗಿತ್ತು. ಇದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ತೊಗರಿಬೇಳೆ ದ...