Raichur, ಏಪ್ರಿಲ್ 2 -- ರಾಯಚೂರು: ಯುಗಾದಿ ಹಬ್ಬದ ಸಂಪ್ರದಾಯದಂತೆ ಬೇಟೆಯಾಡಿದ್ದ ಮೊಲವನ್ನು ಹಿಡಿದು ರಾಯಚೂರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಹಾಗೂ ಸಂಬಂಧಿಕರು ಮೆರವಣಿಗೆ ಮಾಡಿದ ಆರೋಪದ ಮೇಲೆ ಮೂವರ ವಿರುದ್ದ ಪ್ರಕರಣವನ್ನು ಕರ್ನಾಟಕ ಅರಣ್ಯ ಇಲಾಖೆಯವರು ದಾಖಲು ಮಾಡಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಲ್ ಅವರ ಮಗ ಸತೀಶ್ ಗೌಡ, ಅವರ ಸಹೋದರ ಮತ್ತು ಇತರರ ವಿರುದ್ಧ ಬೇಟೆಯಾಡಿದ ಕಾಡು ಮೊಲಗಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮೂವರ ವಿರುದ್ದ ದಾಖಲಿಸಲಾದ ಪ್ರಕರಣವನ್ನು ನ್ಯಾಯಾಧೀಶರ ಎದುರು ಪ್ರಸ್ತುತಪಡಿಸಲಾಗಿದ್ದು, ವಿಚಾರಣೆ ಚುರುಕುಗೊಂಡಿದೆ. ರಾಯಚೂರು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಅರಣ್ಯ ಇಲಾಖೆ ಸತೀಶ್, ಅವರ ಸಹೋದರ ಸಿದ್ದನಗೌಡ ಮತ್ತು ದುರ್ಗೆಶ್ ಎಂಬ ಸಹಚರರ ವಿರುದ್ಧ ಹಾಗೂ ಇತರರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ...
Click here to read full article from source
To read the full article or to get the complete feed from this publication, please
Contact Us.