ಭಾರತ, ಮಾರ್ಚ್ 31 -- ನಟ ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್‌ 1 ಸಿನಿಮಾದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಬಹುಪಾಲು ಭಾಗದ ಶೂಟಿಂಗ್‌ ಸಹ ಮುಗಿದಿದೆ.

ಕುಂದಾಪುರ, ಕೆರಾಡಿ ಸುತ್ತಮುತ್ತ ಸೆಟ್‌ ನಿರ್ಮಿಸಿ ಅಲ್ಲಿಯೇ ಶೂಟಿಂಗ್‌ ಸಹ ಮಾಡಿಕೊಳ್ಳುತ್ತಿದ್ದಾರೆ ರಿಷಬ್‌ ಶೆಟ್ಟಿ.

ಈ ನಡುವೆ ಪ್ರತಿ ಹಬ್ಬವನ್ನೂ ಸಂಪ್ರದಾಯಬದ್ಧವಾಗಿ ಆಚರಿಸುವ ರಿಷಬ್‌ ಶೆಟ್ಟಿ ದಂಪತಿ, ಇದೀಗ ಯುಗಾದಿ ಹಬ್ಬವನ್ನೂ ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಪತ್ನಿ ಮತ್ತು ಇಬ್ಬರು ಮಕ್ಕಳ ಜತೆಗೆ ಆಂಧ್ರದ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ತೆರಳಿದ ರಿಷಬ್‌ ಶೆಟ್ಟಿ, ವಿಶೇಷ ಪೂಜೆ ಮಾಡಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿನ ಗೋವಿಗೂ ಪೂಜೆ ಸಲ್ಲಿಸಿದ್ದಾರೆ.

ಸಾಂಪ್ರದಾಯಿಕವಾಗಿ ಬಿಳಿ ಪಂಚೆ, ಅದರ ಮೇಲೆ ಕೇಸರಿ ಹೊದಿಕೆಯಲ್ಲಿ ರಿಷಬ್‌ ಕಾಣಿಸಿದರೆ, ಹಸಿರು ಸೀರೆಯಲ್ಲಿ ಪ್ರಗತಿ ಕಂಡಿದ್ದಾರೆ.

ದೇವಸ್ಥಾನದ ಆವರಣದಲ್ಲಿನ ಹಸುವನ್ನು ಮುಟ್ಟುತ್ತಿರುವ ಮಗಳು ರಾಧ್ಯಾ

ದೇವಸ್ಥಾನದ ಆವರಣದಲ್ಲಿನ ಹಸುವಿಗೆ ಮೇವು ನೀಡಿದ ರಿಷಬ್‌ ಶೆಟ್ಟಿ ಕುಟುಂಬ....