ಭಾರತ, ಮಾರ್ಚ್ 29 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ ದಿನದಿಂದ ದಿನ ರೋಚಕತೆ ಹೆಚ್ಚಾಗುತ್ತಿದೆ. ಬ್ಯಾಟರ್​​ಗಳು ರನ್​ ಬೇಟೆ ಮತ್ತು ಬೌಲರ್​ಗಳು ವಿಕೆಟ್ ಬೇಟೆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಯುಗಾದಿ ಹಬ್ಬದಂದು ಮತ್ತಷ್ಟು ಮನರಂಜನೆ ಒದಗಿಸಲು ಸಜ್ಜಾಗಿದ್ದಾರೆ. ಶ್ರೀಮಂತ ಲೀಗ್​ನಲ್ಲಿ ಮಾರ್ಚ್​ 30ರ ಭಾನುವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದೆ. ಯಾವ ತಂಡಗಳ ನಡುವೆ ಸೆಣಸಾಟ, ಎಷ್ಟೊತ್ತಿಗೆ, ಎಲ್ಲಿ ನಡೆಯಲಿದೆ ಎಂಬ ವಿವರ ಇಂತಿದೆ.

ಹಬ್ಬದ ದಿನದಂದು ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಸೆಣಸಾಟ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಆರಂಭವಾಗುವ ಈ ಪಂದ್ಯಕ್ಕೆ ವಿಶಾಖಪಟ್ಟಣದ ವೈಎಸ್ ರಾಜಶೇಖರರೆಡ್ಡಿ ಕ್ರಿಕೆಟ್ ಅಸೋಸಿಯೇಷನ್ ಮೈದಾನವು ಆತಿಥ್ಯ ವಹಿಸಲಿದೆ. ದಿನದ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ. ಸಂಜೆ 7.30ಕ್ಕೆ ಶುರುವಾಗುವ ಈ ಪಂದ್ಯಕ್ಕೆ ಗುವಾಹಟಿಯ ಬರ್ಸಾಪುರ ಕ್ರಿಕ...