ಭಾರತ, ಮಾರ್ಚ್ 15 -- ಪಂಚಾಂಗ ಶ್ರವಣ ಎನ್ನುವ ಉಲ್ಲೇಖ ಕೆಲ ಪ್ರಾಚೀನ ಗ್ರಂಥಗಳಲ್ಲಿ ಕಂಡುಬರುತ್ತದೆ. ಆದರೆ ಎಲ್ಲಿಯೂ ಪಂಚಾಂಗ ಪಠಣದ ಬಗ್ಗೆ ಉಲ್ಲೇಖವಿಲ್ಲ. ಶ್ರವಣ ಎಂದರೆ ಕೇಳುವುದು, ಪಠಣ ಎಂದರೆ ಓದುವುದು. ಪಂಚಾಂಗವನ್ನು ಬೇರೆಯವರಿಂದ ಓದಿಸಿ ಅದನ್ನು ನಾವು ಕೇಳಬೇಕು. ಇದರಿಂದ ನಮಗೆ ಅನೇಕ ರೀತಿಯ ಫಲಗಳಿವೆ. ಪಂಚಾಂಗದ ಬಗ್ಗೆ ತಿಳಿದವರನ್ನು ಓದಲು ಆಹ್ವಾನಿಸಬೇಕು. ಮೊದಲು ಅವರಿಗೆ ಪಂಚಾಂಗವನ್ನು ತಾಂಬೂಲ ದಕ್ಷಿಣೆಯ ಸಹಿತ ದಾನ ನೀಡಬೇಕು. ಹೀಗೆ ದಾನ ಪಡೆದ ಪಂಚಾಂಗವನ್ನು ಅವರು ಓದಬೇಕು. ಪಂಚಾಂಗ ಶ್ರವಣವನ್ನು ಬೆಳಗಿನ ವೇಳೆ ಮಾಡುವುದು ಒಳ್ಳೆಯದು. ಪಂಚಾಂಗ ಶ್ರವಣ ಮಾಡಿದ ದಿನದ ಸಂಜೆ ಮನೆಯ ದೀಪವನ್ನು ಹಚ್ಚಿದ ನಂತರ ದೇವರ ಬಳಿ ದೀಪವನ್ನು ಬೆಳಗಬೇಕು.

ಕುಲದೇವರ ಪೂಜೆ ಇಲ್ಲದೆ ಯಾವುದೇ ಪೂಜೆ ಸಂಪೂರ್ಣವಾಗಲಾರದು. ಆದ್ದರಿಂದ ಮೊದಲು ಕುಲ ದೇವರಿಗೆ ಸಂಬಂಧಪಟ್ಟ ಶ್ಲೋಕ ಅಥವಾ ಮಂತ್ರವನ್ನು ಪಠಿಸಬೇಕು. ಇದರಿಂದ ನಮ್ಮ ಮನದಲ್ಲಿನ ಆಸೆ ಆಕಾಂಕ್ಷೆಗಳು ಈಡೇರುತ್ತವೆ. ಅನಂತರ ಜೀವನದಲ್ಲಿ ಎದುರಾಗುವ ವಿಘ್ನಗಳನ್ನು ದೂರಮಾಡುವ ಶ್ರೀ ಮಹಾ...