ಭಾರತ, ಮಾರ್ಚ್ 25 -- ಕರ್ನಾಟಕದ ಯುಗಾದಿ ವರ್ಷ ಭವಿಷ್ಯ: ಶ್ರೀ ವಿಶ್ವಾವಸು ನಾಮ ಸಂವತ್ಸರದಲ್ಲಿ ಕರ್ನಾಟಕದ ರಾಜಕೀಯದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಉಂಟಾಗಲಿವೆ ಎನ್ನುವ ಸೂಚನೆ ಸಿಗುತ್ತಿದೆ. ಕರ್ನಾಟಕ ರಾಜ್ಯದ ವರ್ಷ ಭವಿಷ್ಯ ಬರೆಯುವ ಉದ್ದೇಶದಿಂದ ನವೆಂಬರ್ 1ನೇ ತಾರೀಖು, ಬೆಳಿಗ್ಗೆ 10:30 ನ್ನು ವೇಳೆಯಾಗಿ ಪರಿಗಣಿಸಲಾಗಿದೆ. ಲಗ್ನ ದೊರೆಯದ ಕಾರಣ ಚಂದ್ರನಿರುವ ರಾಶಿಯನ್ನು ಪರಿಗಣಿಸಿದ್ದೇನೆ. ಹೀಗೆ ಮಾಡುವುದರಿಂದ ದಶಾಭುಕ್ತಿಯ ಲೆಕ್ಕಾಚಾರದಲ್ಲಿ ಕೇವಲ ಒಂದು ಅಥವಾ ಎರಡು ದಿನಗಳ ವ್ಯತ್ಯಾಸವಾಗುತ್ತದೆ. ಇದರಲ್ಲಿಯೂ ಚಂದ್ರಕಲಾನಾಡಿಯ ಸಹಾಯ ಪಡೆಯಲಾಗಿದೆ.

ಈ ವರ್ಷ ಯಾವುದೇ ರಾಜಕೀಯ ಪಕ್ಷದಲ್ಲಿ ಒಗ್ಗಟ್ಟು ಇರುವುದಿಲ್ಲ. ಹಿರಿಯ ನಾಯಕರ ಕೆಲವೊಂದು ತಪ್ಪು ನಿರ್ಧಾರಗಳು ದೊಡ್ಡಮಟ್ಟದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಿರಿಯ ರಾಜಕಾರಣಿಯೊಬ್ಬರ ಆರೋಗ್ಯದಲ್ಲಿ ತೊಂದರೆ ಕಂಡು ಬರಲಿದೆ. ಖರ್ಚುವೆಚ್ಚಗಳು ನಿಯಂತ್ರಿಸಲು ಸಾಧ್ಯವಾಗದ ಮಟ್ಟಕ್ಕೆ ತಲುಪುತ್ತವೆ. ಇದರಿಂದಾಗಿ ನಿತ್ಯ ಜೀವನದಲ್ಲಿ ಬಳಸುವ ಪದಾರ್ಥಗಳ ಬೆಲೆಯು ಪದೇಪದೇ ಹೆಚ...