Bengaluru, ಮಾರ್ಚ್ 26 -- Majaa Talkies: ಯೋಗರಾಜ್ ಭಟ್ 'ಮುಂಗಾರು ಮಳೆ' ಕನ್ನಡ ಚಿತ್ರರಂಗಕ್ಕೆ ಬಂಗಾರ ಬೆಳೆದು ಕೊಟ್ಟ ಚಿತ್ರ. ಬಿಡುಗಡೆಯಾಗಿ ದಶಕಗಳೇ ಕಳೆದು ಹೋಗಿದ್ದರೂ ಮಳೆಯ ಮೆಮೊರಿ ಅಳಿಸಿ ಹೋಗುವಂಥದ್ದಲ್ಲ. ಮತ್ತೆ ಮಳೆ ಹುಯ್ಯುತ್ತಿದೆ ಎಲ್ಲ ನೆನಪಾಗುತಿದೆ ಅನ್ನುವ ಹಾಗೆ ಮತ್ತೆ 'ಮುಂಗಾರು ಮಳೆ'ಯ ನೆನಪು ಅಪ್ಪಳಿಸಿ ಬರುತ್ತಿರೋದು ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ 'ಮಜಾ ಟಾಕೀಸ್'ನಲ್ಲಿ. ಹಾಗೆ ಅಪ್ಪಳಿಸೋದಕ್ಕೆ ಇನ್ನೊಂದು ಕಾರಣವೂ ಇದೆ ಅದೇ, ಭಟ್ಟರ ಹೊಸ ಸಿನಿಮಾ 'ಮನದ ಕಡಲು'.

ಹೌದು, ಭಟ್ಟರ ಹೊಸ ಸಿನಿಮಾ 'ಮನದ ಕಡಲು' ಜೊತೆ 'ಮುಂಗಾರು ಮಳೆ'ಯ ಫ್ಯಾಮಿಲಿ 'ಮಜಾ ಟಾಕೀಸ್'ಗೆ ಆಗಮಿಸಿದೆ. ಈ ಮನರಂಜನೆಯ ಮಹಾ ಸಮ್ಮಿಲನ ಯುಗಾದಿ ಹಬ್ಬದ ಸ್ಪೆಷಲ್ ಆಗಿದ್ದು, ಶನಿವಾರ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮೂರು ಗಂಟೆಗಳ ಈ 'ಮಹಾ ಸಂಚಿಕೆ' ಮನೆಮಂದಿಗೆ ಮನರಂಜನೆಯ ಮಳೆಯನ್ನೇ ಹರಿಸಲಿದೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಈ ವಾರ ಸೂಪರ್‌ಸ್ಟಾರ್‌ಗಳ ಸಿನಿಮಾ ಹಬ್ಬ; ಇಲ್ಲಿವೆ ಟಾಪ...