ಭಾರತ, ಮಾರ್ಚ್ 21 -- ಬೆಂಗಳೂರು: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಶುರುವಾಗಿದೆ. ಹಳೆ ಮೈಸೂರು ಭಾಗದಲ್ಲಿ ಯುಗಾದಿ ಹಬ್ಬದ ಜೊತೆ ಹೊಸ ತೊಡಕು ಆಚರಣೆ ಕೂಡ ಬಹಳ ವಿಶೇಷ. ಹೊಸ ತೊಡಕು ಎಂದರೆ ಮಾಂಸಾಹಾರದ ಊಟ. ಯುಗಾದಿ ಮರುದಿನ ಬೆಂಗಳೂರು, ಮಂಡ್ಯ, ಮೈಸೂರು ಮುಂತಾದ ಕಡೆಗಳಲ್ಲಿ ಹೊಸತೊಡಕು ಆಚರಿಸುತ್ತಾರೆ. ಬೆಂಗಳೂರಿನಲ್ಲಿ ಹೊಸತೊಡಕಿನ ಸಲುವಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗುತ್ತದೆ, ಅದು ಕೂಡ ಯುಗಾದಿ ಹಬ್ಬಕ್ಕೆ ಮುಂಚಿತವಾಗಿ. ಈ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಬಹುದು.

ಅದೇನಪ್ಪಾ ಅಂತ ಸ್ಪರ್ಧೆ ಅಂತೀರಾ, ಇದು ಖಂಡಿತ ಒಂಥರಾ ವಿಶೇಷ ಸ್ಪರ್ಧೆ. ಇಲ್ಲಿ ನೀವು ಹಾಡಲ್ಲ ಬೇಕಿಲ್ಲ, ಓಡಬೇಕಿಲ್ಲ, ಕುಣಿಯಬೇಕಿಲ್ಲ, ಆದ್ರೆ ನೀವು ತಿನ್ನಬೇಕು. ಹೌದು ಈ ಸ್ಪರ್ಧೆಯ ಹೆಸರು 'ನಾಟಿ ಕೋಳಿ, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ'. ಕಳೆದ 3 ವರ್ಷಗಳಿಂದ ಈ ಸ್ಪರ್ಧೆ ನಡೆಯುತ್ತಿದೆ.

ಬೆಂಗಳೂರಿನ ನಂದಿನಿ ಲೇಔಟ್‌ನ ಜೈಮಾರುತಿ ನಗರದ ಬಯಲು ರಂಗ ಮಂದಿರ ಮೈದಾನದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಕೆಂಪೇಗೌಡ ಚಾರಿಟೆಬಲ್ ಟ್ರಸ್ಟ್ ಈ ಸ್ಪರ್ಧ...