Bengaluru, ಮಾರ್ಚ್ 26 -- ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಈ ಬಾರಿ ಯುಗಾದಿ ಹಬ್ಬ 2025ರ ಮಾರ್ಚ್ 30 (ಭಾನುವಾರ) ರಂದು ಬಂದಿದೆ. ಹಬ್ಬಕ್ಕೆ ಈಗಾಗಲೇ ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಹೊಸ ಬಟ್ಟೆ, ಹಬ್ಬದ ಸರಕು ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಮಯದಲ್ಲಿ ಯುಗಾದಿಯ ದಿನದಂದು ಕೆಲವೊಂದು ವಸ್ತುಗಳನ್ನು ಮನೆಗೆ ಕರೆತಂದರೆ ಎಷ್ಟೇ ಬಡತನ, ಆರ್ಥಿಕ ಸಮಸ್ಯೆಗಳು ಇದ್ದರೂ ನಿವಾರಿಸಿಕೊಳ್ಳಬಹುದು. ಯುಗಾದಿಯ ಮಹತ್ವದ ಜೊತೆಗೆ ಯಾವೆಲ್ಲಾ ವಸ್ತುಗಳನ್ನು ಖರೀದಿ ಮಾಡಿದರೆ ಹೆಚ್ಚು ಶುಭ ಫಲಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಈ ಯುಗಾದಿ ಹಬ್ಬವು ಚೈತ್ರ ಮಾಸದಲ್ಲಿ ಪ್ರಾರಂಭವಾಗುತ್ತದೆ. ಆ ದಿನದಿಂದ ಹಿಂದೂಗಳಿಗೆ ಹೊಸ ವರ್ಷ ಪ್ರಾರಂಭವಾಗುತ್ತದೆ. ವಿಶೇಷ ಪೂಜೆ, ಹೋಳಿಗೆ ಸೇರಿದಂತೆ ಸಿಹಿ ತನಿಸುಗಳನ್ನು ತಯಾರಿಸುವ ಮೂಲಕ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ದಕ್ಷಿಣದ ರಾಜ್ಯ ಯುಗಾದಿಯನ್ನು ಅದ್ಧೂರಿಯಾ...