ಭಾರತ, ಮಾರ್ಚ್ 28 -- ಯುಗಾದಿ ಆರೋಗ್ಯ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಧನುದಿಂದ ಮೀನದವರಿಗೆ ನಾಲ್ಕು ರಾಶಿಯವರ ಆರೋಗ್ಯ ವರ್ಷ ಭವಿಷ್ಯ ಇಲ್ಲಿದೆ.

ಉಷ್ಣದ ದೋಷ ಇರುತ್ತದೆ. ಚರ್ಮದ ದೋಷವಿರುತ್ತದೆ. ದೈಹಿಕ ಶಕ್ತಿ ಹೆಚ್ಚಾಗಿರುತ್ತದೆ. ಆದ್ದರಿಂದ ಅರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ಅಧಿಕ ರಕ್ತದ ಒತ್ತಡ ಇರುತ್ತದೆ. ಹಿರಿಯ ವ್ಯಕ್ತಿಗಳ ಆರೋಗ್ಯದಲ್ಲಿ ಬದಲಾವಣೆಗಳು ಇರಲಿವೆ. ಕಫದ ತೊಂದರೆ ಇರುತ್ತದೆ. ಮಲಬದ...