Bengaluru, ಮಾರ್ಚ್ 27 -- ಕರ್ನಾಟಕದಲ್ಲಿ ಬಹುತೇಕ ಜನರು ಚಾಂದ್ರಮಾನ ಪದ್ಧತಿಯ ಕಾಲಗಣನೆ ಪರಿಗಣಿಸುತ್ತಿದ್ದು, ಇದರಂತೆ ಈ ಬಾರಿ ಮಾರ್ಚ್ 30ರ ಭಾನುವಾರ ಯುಗಾದಿ ಹಬ್ಬ. ಅಂದರೆ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೊದಲ ದಿನ. ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮದೇವನು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ. ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ವರ್ಷಗಳು, ವಾರಗಳು, ದಿನಗಳು ಮತ್ತು ತಿಂಗಳನ್ನು ಸೃಷ್ಟಿಸಿದನು. ಆದ್ದರಿಂದ, ಯುಗಾದಿಯ ದಿನವನ್ನು ಬ್ರಹ್ಮಾಂಡದ ಸೃಷ್ಟಿಪ್ರಕ್ರಿಯೆ ಪ್ರಾರಂಭವಾದ ಮೊದಲ ದಿನವೆಂದು ಪರಿಗಣಿಸಲಾಗಿದೆ. ಹಿಂದೆ ದಕ್ಷಿಣ ಭಾರತವನ್ನು ಆಳುತ್ತಿದ್ದ ಶಾಲಿವಾಹನನು ತನ್ನ ವಿಜಯದ ಸಂಕೇತವಾಗಿ ಶಾಲಿವಾಹನ ಶಕೆ ಪ್ರಾರಂಭಿಸಿದ್ದು ಕೂಡ ಇದೇ ದಿನ. ಶಿಶಿರಋತು ಕಳೆದು ಹೊಸಚಿಗುರು, ಎಲೆ, ಹೂವುಗಳಿಗೆ ಕಾರಣವಾಗಿ ಚೈತ್ರದ ಆಗಮನವು ಸಂತಸದ ಸಮಯವನ್ನು ಬಿಂಬಿಸುತ್ತದೆ.
ಈ ದಿನದ ಬೇವು ಬೆಲ್ಲದ ಸೇವನೆ ಅರ್ಥಪೂರ್ಣವಾದದ್ದು .ಜೀವನದ ಸಿಹಿಕಹಿಗಳಲ್ಲೂ, ಸುಖ ದುಃಖಗಳಲ್ಲೂ ಸಂಯಮಿಯ...
Click here to read full article from source
To read the full article or to get the complete feed from this publication, please
Contact Us.