Bengaluru, ಮಾರ್ಚ್ 15 -- ಯುಗಾದಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತುರರಾಗಿದ್ದಾರೆ. ಬೇವು-ಬೆಲ್ಲ ಹಂಚುವ ಹಬ್ಬ ಯುಗಾದಿ. ಯುಗಾದಿಯಂತದು ಮನೆಗೆ ಅತಿಥಿಗಳು ಬರುತ್ತಾರೆ. ಅವರಿಗಾಗಿ ರುಚಿಕರವಾದ, ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುವುದು ವಾಡಿಕೆ. ಯುಗಾದಿ ಹಬ್ಬದ ಸಂಜೆ ವೇಳೆಗೆ ಈ ಹೆಸರು ಬೇಳೆ ಸಮೋಸಾ ಸ್ನಾಕ್ಸ್ ತಯಾರಿಸಿ ತಿನ್ನಿ. ಮನೆಗೆ ಬರುವ ಅತಿಥಿಗಳಿಗೂ ಮಾಡಿಕೊಡಿ. ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ.

ಬಹುತೇಕ ಮಂದಿ ಆಲೂಗಡ್ಡೆ ಅಥವಾ ಈರುಳ್ಳಿ ಸಮೋಸಾ ತಯಾರಿಸುತ್ತಾರೆ. ಆದರೆ, ಇದಕ್ಕಿಂತ ರುಚಿಕರವಾಗಿರುತ್ತೆ ಹೆಸರುಬೇಳೆ ಸಮೋಸಾ. ಇದನ್ನು ತಯಾರಿಸುವುದು ಸಹ ತುಂಬಾ ಸುಲಭ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇಷ್ಟಪಡುವ ಈ ಪ್ರೋಟೀನ್ ಭರಿತ ಖಾದ್ಯವನ್ನು ತಯಾರಿಸಿ. ಹೆಸರು ಬೇಳೆ ಸಮೋಸಾ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: 1 ಕಪ್ ಹೆಸರುಬೇಳೆ, 3 ಚಮಚ ಸೋಯಾಬೀನ್ ಎಣ್ಣೆ, 2 ಚಮಚ ಮೆಣಸಿನ ಪುಡಿ, 1 ಚಮಚ ಕಪ್ಪು ಉಪ್ಪು, 1/2...