ಭಾರತ, ಮಾರ್ಚ್ 24 -- ನವದೆಹಲಿ: ಯುಗಾದಿ ಹಬ್ಬಕ್ಕೂ ಮುಂಚಿತವಾಗಿ ಸಂಸದರಿಗೆ ಕೇಂದ್ರ ಸರ್ಕಾರ ಶುಭಸುದ್ದಿ ಕೊಟ್ಟಿದ್ದು, ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಹಣಕಾಸು ವರ್ಷದ ಕೊನೆಯ ತಿಂಗಳು ಮುಗಿಯಲು ಕೆಲವೇ ದಿನಗಳು ಬಾಕಿಯಿದ್ದು, ಅದಕ್ಕೂ ಮುನ್ನ ಸಂಸತ್‌ ಸದಸ್ಯರ ವೇತನ ಹೆಚ್ಚಳ ಘೋಷಣೆಯಾಗಿದೆ. ಸಂಸದರು ಮತ್ತು ಮಾಜಿ ಸಂಸದರ ವೇತನ, ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಪರಿಷ್ಕರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ (ಮಾ.22) ಪ್ರಕಟಿಸಿದ್ದು, ಹಾಲಿ ಸಂಸದರ ವೇತನದಲ್ಲಿ ಶೇಕಡಾ 24ರಷ್ಟು ಹೆಚ್ಚಳವನ್ನು ಸೂಚಿಸಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಹಾಲಿ ಸದಸ್ಯರಿಗೆ ದೈನಂದಿನ ಭತ್ಯೆಗಳು ಮತ್ತು ಮಾಜಿ ಸದಸ್ಯರಿಗೆ ಐದು ವರ್ಷಗಳಲ್ಲಿ ಪ್ರತಿ ವರ್ಷದ ಸೇವೆಗೆ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಹೆಚ್ಚಿಸಲಾಗಿದೆ.

1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ತಿಳಿಸಲಾದ ವೆಚ್ಚ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆಯಡಿ (Sala...