ಭಾರತ, ಮೇ 16 -- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸ ಕೈಗೊಂಡು ಅಲ್ಲಿಗೆ ತಲುಪಿದ ವೇಳೆ ಅವರಿಗೆ ಅಲ್ಲಿ ಸಿಕ್ಕ ಸ್ವಾಗತದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ, ಯುಎಇ ಹೆಣ್ಮಕ್ಕಳು ಕೂದಲು ಹರಡಿ ತಲೆ ಅಲ್ಲಾಡಿಸುತ್ತ ನೃತ್ಯ ಮಾಡಿ ಸ್ವಾಗತಿಸಿದ ಪರಿ ಕಂಡು ಸ್ವತಃ ಡೊನಾಲ್ಡ್ ಟ್ರಂಪ್ ಅಚ್ಚರಿಗೊಂಡು, ಏನಿದು ಎಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜೈಯದ್ ಅಲ್ ನಹ್ಯಾನ್ ಅವರನ್ನು ನಿಲ್ಲಿಸಿ ಕೇಳಿದ ದೃಶ್ಯ ವಿಡಿಯೋದಲ್ಲಿದೆ. ಯುಎಇ ಹೆಣ್ಮಕ್ಕಳು ಕೂದಲು ಹರಡಿ ತಲೆ ಅಲ್ಲಾಡಿಸುತ್ತ ಮಾಡಿದ ನೃತ್ಯದ ಈಗ ಜಗತ್ತಿನ ಗಮನಸೆಳದಿದೆ. ಇದು ಅಲ್ಲಿನ ಸಾಂಪ್ರದಾಯಿಕ ನೃತ್ಯ ಅಲ್ ಅಯ್ಯಾಲ ಎಂಬುದು ಬಹಿರಂಗವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಇ ಅಧ್ಯಕ್ಷರ ಅರಮನೆಯಾದ ಕಾಸ್ರ್ ಅಲ್ ವಟನ್‌ನಲ್ಲಿ ಎರಡು ಸಾಲು ಹೆಣ್ಮಕ್ಕಳ ನಡುವೆ ನಡೆದು ಹೋಗುತ್ತಾರೆ. ಆಗ ಅಲ್ಲಿ, ಡ್ರಮ್ ಬಡಿತಕ್ಕೆ ಅನುಗುಣವಾಗಿ ಬಿಳಿ ನಿಲುವಂಗಿ ಧರಿಸಿದ ಹೆಣ್ಮಕ್ಕಳು ಉದ್ದ, ಕಪ್ಪು ಕೂದಲು ಹರಡಿ ತಲೆ ...
Click here to read full article from source
To read the full article or to get the complete feed from this publication, please
Contact Us.