Bengaluru, ಫೆಬ್ರವರಿ 1 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ (ಜನವರಿ 31ರ) ಸಂಚಿಕೆಯಲ್ಲಿ ಭಾಗ್ಯಾಳನ್ನು ಕೆಲಸದಿಂದ ತೆಗೆದುಹಾಕಲು ಶತಾಯಗತಾಯ ಯತ್ನಿಸುತ್ತಿರುವ ಕನ್ನಿಕಾಳ ಕುತಂತ್ರದ ಪ್ರಸಂಗ ನಡೆಯಿತು. ಹೋಟೆಲ್‌ಗೆ ಬಂದಿರುವ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆಯಾಗಿದೆ ಎಂದು ಹೋಟೆಲ್ ಎದುರು ಹಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಧ್ಯಮದವರು ಕೂಡ ಬಂದು ಹೋಟೆಲ್‌ನವರನ್ನು ಪ್ರಶ್ನಿಸುತ್ತಿದ್ದಾರೆ. ಹೋಟೆಲ್ ಮ್ಯಾನೇಜರ್ ಭಾಗ್ಯಾಳನ್ನು ಕರೆದು, ನೀವೇ ಉತ್ತರಿಸಿ ಎಂದು ಹೇಳುತ್ತಾರೆ. ಆಗ ಭಾಗ್ಯ ಉತ್ತರಿಸಲು ತಡಕಾಡುತ್ತಾಳೆ. ಅದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ತಂಗಿ ಕನ್ನಿಕಾ ಕಾಮತ್ ಕಾರಿನಲ್ಲಿ ಅಲ್ಲಿಗೆ ಬರುತ್ತಾಳೆ. ಅದನ್ನು ಕಂಡು ಭಾಗ್ಯಾ, ಅಯ್ಯೋ ಇವಳು ಮತ್ತೆ ಇಲ್ಲಿಗೆ ಬಂದಳಾ ಎಂದು ಯೋಚಿಸುತ್ತಾಳೆ.

ಪ್ರತಿ ಬಾರಿಯೂ ನಮ್ಮ ಕಡೆಗೇ ಬಂದು ತೊಂದರೆ ಮಾಡುತ್ತಿದ್ದೀಯಾ ಅಲ್ಲವೇ? ಯಾಕೆ, ನಮ್ಮ ಮೇಲೆ ಅಷ್ಟೊಂದು ದ್ವೇಷವೇ ಎಂದು ಕನ್ನಿಕಾ ಭಾಗ್ಯಾಳನ್ನು ಕೇಳುತ್ತಾಳೆ. ಮತ್ತೊಂದೆಡೆ ಭಾಗ್ಯ...