ಭಾರತ, ಮೇ 10 -- ಅರ್ಥ: ನಮ್ರತೆ; ಜಂಬವಿಲ್ಲದಿರುವುದು; ಅಹಿಂಸೆ; ತಾಳ್ಮೆ; ಸರಳತೆ; ನಿಜವಾದ ಗುರುವಿನ ಬಳಿಗೆ ಹೋಗುವುದು; ಶೌಚ; ಸೂರ್ಯ; ಆತ್ಮಸಂಯಮ; ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ; ಅಹಂಕಾರವಿಲ್ಲದಿರುವುದು; ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು; ಅನಾಸಕ್ತಿ; ಮಕ್ಕಳು, ಹೆಂಡತಿ, ಮನೆ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು; ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ; ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ; ಏಕಾಂತ ಪ್ರದೇಶದಲ್ಲಿ ವಾಸಮಾಡುವ ಅಭಿಲಾಷೆ; ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು; ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು; ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ; ಇದಲ್ಲದೆ ಇರುವುದೆಲ್ಲ ಅಜ್ಞಾನ.

ಭಾವಾರ್ಥ: ಹೆಚ್ಚು ಬುದ್ದಿಯಿಲ್ಲದಿರುವವರು ಜ್ಞಾನದ ಪ್ರಕ್ರಿಯೆಯನ್ನು ಕಾರ್ಯಕ್ಷೇತ್ರದಲ್ಲಿನ ಪರಸ್ಪರ ಕ್ರಿಯೆ ಎಂದು ಕೆಲವೊಮ್ಮೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ವಾಸ್ತ...