Bangalore, ಮೇ 22 -- ಬೆಂಗಳೂರು: ಸಮಾಜದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ 'ಪದ್ಮ ವಿಭೂಷಣ' ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಹಿಂದಿನ ದಿನದಂದು ಕೇಂದ್ರ ಸರ್ಕಾರದಿಂದ ಪ್ರಕಟಿಸಲಾಗುತ್ತದೆ. ಈ ಪ್ರಶಸ್ತಿಗಳಿಗಾಗಿ ವಿವಿಧ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುವವರು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ತಮ್ಮ ಅರ್ಜಿಗಳನ್ನು ಅರ್ಹರು ಸಲ್ಲಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಲೆ(ಜನಪ್ರಿಯ ಕಲೆ, ಸಂಗೀತ, ಚಿತ್ರಕಲೆ, ವಾಸ್ತುಶಿಲ್ಪ, ಶಿಲ್ಪಕಲೆ, ಚಲನಚಿತ್ರ, ಛಾಯಾಗ್ರಹಣ ಮತ್ತಿತರ), ಸಮಾಜದ ಕಾರ್ಯ(ಸಮಾಜ ಸೇವೆ, ಧರ್ಮಾರ್ಥ ಸೇವೆ, ಸಮುದಾಯ ಯೋಜನೆಯ ನಿಮಿತ್ತದ ಕೊಡುಗೆ ಒಳಗೊಂಡಂತೆ), ಸಾರ್ವಜನಿಕ ವ್ಯವಹಾರ(ಕಾನೂನು ಮತ್ತು ಸಾರ್ವಜನಿಕ ಜೀವನ ರಾಜಕೀಯ ಇತ್ಯಾದಿ), ವಿಜ್ಞಾನ, ತಾಂತ್ರಿಕ, ತಂತ್ರಜ್ಞಾನ ಮತ್ತು ಇತರ ಗೌರವಾನ್ವಿತ...