ಭಾರತ, ಮಾರ್ಚ್ 8 -- ಈ ಮಹಿಳೆ ಯಾರೆಂದು ಗೆಸ್ ಮಾಡಿ.. ದಿಟ್ಟಿಸಿ ನೋಡಿ. ಆಕೆ ಯಾರಿರಬಹುದು.. ಆದರೂ ಗೊತ್ತಾಗಲಿಲ್ವಾ? ಇಲ್ಲಿ ಕೆಲವೊಂದು ಸುಳಿವು ನೋಡಿ. ಈಕೆ ಭಾರತೀಯ ಚಿತ್ರರಂಗ ಪ್ರಸಿದ್ಧ ನಟಿ. ಮುಖ್ಯಮಂತ್ರಿಯ ಮಗನನ್ನು ವರಿಸಿದ್ದಾರೆ. ಇಬ್ಬರು ಮಕ್ಕಳ ತಾಯಿ. ಈಕೆಯನ್ನು ವಿರಾಟ್ ಕೊಹ್ಲಿ ಅವರು ಒಂದೊಮ್ಮೆ ಕ್ಯೂಟ್ ಎಂದೂ ಕರೆದಿದ್ದರು. ಈಗಲಾದರೂ ಗೊತ್ತಾಯ್ತಾ? ಮುಂದೆ ಓದಿ..

ಗೊತ್ತಾಯ್ತಾ? ಹೌದು ಅವರು ನಟಿ ಜೆನಿಲಿಯಾ ಡಿಸೋಜ. ನಟ ಹಾಗೂ ಮಹಾರಾಷ್ಟ್ರದ ಎರಡು ಬಾರಿ ಮುಖ್ಯಮುಂತ್ರಿ ಆಗಿದ್ದ ವಿಲಾಸ್​ರಾವ್ ದೇಶ್​ಮುಖ್ ಅವರ ಪುತ್ರ ರಿತೇಶ್ ದೇಶ್​ಮುಖ್ ಅವರ ಪತ್ನಿ. ಜೆನಿಲಿಯಾ ಅವರನ್ನು ವರ್ಷಗಳ ಹಿಂದೊಮ್ಮೆ ವಿರಾಟ್ ಕೊಹ್ಲಿ ಕ್ಯೂಟ್ ಎಂದು ಹೇಳಿದ್ದರು.

ವಿರಾಟ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಜೆನಿಲಿಯಾರನ್ನು 'ಕ್ಯೂಟ್' ಎಂದು ಕರೆದಿದ್ದರು. ನಿರೂಪಕರು ಕೇಳಿದ ಪ್ರಶ್ನೆಗೆ ಹೀಗೆ ಒತ್ತರಿಸಿದ್ದರು.

ನೀವು ಕ್ರಿಕೆಟ್ ಮೈದಾನದಲ್ಲಿ ನೋಡಲು ಬಯಸುವ ಒಬ್ಬ ಬಾಲಿವುಡ್ ನಟಿಯನ್ನು ಹೆಸ...