ಭಾರತ, ಫೆಬ್ರವರಿ 19 -- ನವದೆಹಲಿ: 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಇನ್ನೂ ಮುಖ್ಯಮಂತ್ರಿ ಯಾರು ಎಂಬುವುದನ್ನು ಅಂತಿಮಗೊಳಿಸಿಲ್ಲ. ಚುನಾವಣಾ ಫಲಿತಾಂಶ ಹೊರಬಂದು 10 ದಿನಗಳು ಕಳೆದಿದ್ದು, ಇಂದು (ಫೆಬ್ರುವರಿ 19ರ ಬುಧವಾರ) ಸಿಎಂ ಯಾರು ಎಂಬುವುದಕ್ಕೆ ಉತ್ತರ ಸಿಗಲಿದೆ. ದೆಹಲಿಯಲ್ಲಿ ಇಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನೂತನ ಮುಖ್ಯಮಂತ್ರಿಯನ್ನು ಘೋಷಿಸುವ ಸಾಧ್ಯತೆಯಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಭಾರಿ ಬಹುಮತದೊದಿಗೆ ಅಧಿಕಾರಕ್ಕೆ ಮರಳಿತು. ಅದರ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಎಎಪಿ ನಾಯಕಿ ಅತಿಶಿ ರಾಜೀನಾಮೆ ಸಲ್ಲಿಸಿದರು. ಇಂದು ನೂತನ ಸಿಎಂ ಆಯ್ಕೆ ನಡೆಯಲಿದ್ದು, ನಾಳೆ (ಫೆ. 20) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಮ್ ಲೀಲಾ ಮೈದಾನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಮೊದಲು ಸಂಜೆ 4:30ಕ್ಕೆ ನಿಗದಿಯಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭವು, ಈಗ ಮಧ್ಯಾಹ್ನದ ಸುಮಾರಿಗೆ ನಡೆಯಲಿದೆ ಎಂದು ಸುದ್ದಿ ಸಂಸ...