Bengaluru, ಫೆಬ್ರವರಿ 25 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 24ರ ಸಂಚಿಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜಾಹ್ನವುಗೆ ಪ್ರಜ್ಞೆ ಮರಳಿ ಬಂದಿದೆ. ಅಲ್ಲದೆ, ವೈದ್ಯರು ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಬೇಕು, ಮೊದಲು ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಜಯಂತ್ ಮಾತ್ರ ಜಾಹ್ನವಿ ಜತೆ ಮತ್ತೆ ಮತ್ತೆ ನನ್ನಲ್ಲಿ ಮಾತನಾಡಿ, ಎಲ್ಲವನ್ನೂ ಸರಿಪಡಿಸೋಣ ಎಂದು ಹೇಳುತ್ತಿದ್ದಾನೆ. ಮತ್ತೊಂದೆಡೆ ಮನೆಯಿಂದ ಲಕ್ಷ್ಮೀ ಮತ್ತು ಶ್ರೀನಿವಾಸ್ ಆಗಾಗ ಕರೆ ಮಾಡಿ, ಮಗಳ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ವಿಶ್ವ ಮತ್ತು ತನ್ವಿ ಕೂಡ ಅದೇ ಆಸ್ಪತ್ರೆಯಲ್ಲಿ ಇದ್ದು, ಜಯಂತ್ ಅವರಿಗೆ ಹಾರಿಕೆಯ ಉತ್ತರ ನೀಡಿದ್ದಾನೆ, ಅದು ತನ್ವಿಗೆ ಸಂಶಯ ಹೆಚ್ಚಿಸಿದೆ.

ಸಿದ್ದೇಗೌಡನಿಗೆ ಮನೆಯಲ್ಲಿ ಭಾವನಾ ಅವರು ನನ್ನ ಮಾತಗಳನ್ನು ಕೇಳಿಸಿಕೊಂಡಿರಬಹುದು ಎಂಬ ಸಂಶಯವಿದೆ. ಅದಕ್ಕಾಗಿ ಸಿದ್ದೇಗೌಡ, ಭಾವನಾ ಬಳಿ, ನೀವು ನನ್ನ ಮಾತುಗಳನ್ನು ಅಂದು ಕೇಳಿಸಿಕೊ...