ಭಾರತ, ಫೆಬ್ರವರಿ 17 -- ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ಷೇತ್ರ ಯಾದಗಿರಿಗುಟ್ಟ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವನ್ನು ವಾರ್ಷಿಕ ಬ್ರಹ್ಮೋತ್ಸವಕ್ಕಾಗಿ ಅಲಂಕರಿಸಲಾಗಿದೆ. ದೇವಾಲಯದ ಗೋಪುರದ ಚಿನ್ನದ ಹೊದಿಕೆಯ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಬ್ರಹ್ಮೋತ್ಸವಕ್ಕೆ ಮೊದಲು 108 ಋತ್ವಿಕರರಿಂದ ವಿಶೇಷ ಪೂಜೆ, ಧಾರ್ಮಿಕ ವಿಧಿಗಳು ನೆರವೇರಲಿವೆ. ಭಾರತದ ವಿವಿಧೆಡೆಯಿರುವ ಪವಿತ್ರ ನದಿಗಳಿಂದ ನೀರು ತರಿಸಲಾಗುತ್ತದೆ. ಹೋಮಗಳನ್ನು ನಡೆಸಲೆಂದು ಬೆಟ್ಟದ ಮೇಲೆ ಐದು ಹೋಮಕುಂಡಗಳನ್ನು ಸ್ಥಾಪಿಸಲಾಗಿದೆ.

ಬೆಟ್ಟದ ಮೇಲಿರುವ ಸ್ವಾಮಿಯ ಸನ್ನಿಧಾನದಲ್ಲಿ ಶ್ರೀ ಸುದರ್ಶನ ನರಸಿಂಹ ಮತ್ತು ಶ್ರೀ ಲಕ್ಷ್ಮಿ ಹೋಮಗಳನ್ನು ನಡೆಸಲಾಗುತ್ತದೆ. 23ರಂದು ರಾಜಗೋಪುರಕ್ಕೆ 25 ಕಲಶಗಳಿಂದ ಅಭಿಷೇಕ ನಡೆಯಲಿದೆ. 19ರಿಂದ 22 ರವರೆಗೆ 108 ಋತ್ವಿಕರು ಸುದರ್ಶನ ಹೋಮ ಮತ್ತು ನರಸಿಂಹ ಹೋಮ ನಡೆಸಿಕೊಡಲಿದ್ದಾರೆ. 23ರಂದು ಸುಮಾರು ಒಂದು ಲಕ್ಷ ಜನರಿಗೆ ಪ್ರಸಾದ ವಿತರಿಸಲಾಗುತ್ತದೆ.

ಯಾದಗಿರಿಗುಟ್ಟ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ವಿಮಾ...