Bengaluru,ಬೆಂಗಳೂರು, ಏಪ್ರಿಲ್ 13 -- ಪ್ರಯತ್ನದ ಜೊತೆಗೆ ಅದೃಷ್ಟವೂ ಬೇಕು ಮತ್ತು ಅದೃಷ್ಟ ಕೂಡ ಧೈರ್ಯಶಾಲಿಗಳ ಪರವಾಗಿರುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಈ ಸಾಲುಗಳು ಸನ್​ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಸರಿಯಾಗುತ್ತೆ. ಏಪ್ರಿಲ್ 12ರ ಶನಿವಾರ ಸಂಜೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಭಿಷೇಕ್ ಶರ್ಮಾ 28 ರನ್​ಗೆ ಔಟಾಗಿ ಹೋಗಬೇಕಿತ್ತು! ಆದರೆ ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಪಂಜಾಬ್ ಭಾರಿ ಬೆಲೆ ತೆತ್ತಿದೆ.

ಪಂಜಾಬ್ ನೀಡಿದ್ದ 246 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್​ರೈಸರ್ಸ್, ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಗೆಲುವಿನ ಕಾರಣಕರ್ತ ಅಭಿಷೇಕ್ ಶರ್ಮಾ. ಇನ್ನಿಂಗ್ಸ್ ಆರಂಭದಿಂದ ಕೊನೆಯ ತನಕ ಅಬ್ಬರಿಸಿ ಬೊಬ್ಬಿರಿಸಿ ಪಂಜಾಬ್ ಬೌಲರ್​ಗಳ ಚಳಿ ಬಿಡಿಸಿದ ಅಭಿ, ಕೇವಲ 55 ಎಸೆತಗಳಲ್ಲಿ 14 ಬೌಂಡರಿ, 10 ಗಗನಚುಂಬಿ ಸಿಕ್ಸರ್​ಗಳ ಸಹಿತ ದಾಖಲೆಯ 141 ರನ್ ಚಚ್ಚಿದರು. ಸ್ಟ್ರೈಕ್​ರೇಟ್ 256.36 ಇತ್ತು...