ಭಾರತ, ಜನವರಿ 26 -- Vineeta Singh life Story: ಶಾರ್ಕ್ ಟ್ಯಾಂಕ್ ಇಂಡಿಯಾ ಎನ್ನುವ ರಿಯಾಲಿಟಿ ಶೋ ನಾಲ್ಕನೇ ಸೀಸನ್ ಇದೇ ತಿಂಗಳ 6ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರು 4000 ಕೋಟಿ ಸಾಮ್ರಾಜ್ಯದ ಒಡತಿ. ಹೌದು, ಅವರ ಹೆಸರು ವಿನೀತಾ ಸಿಂಗ್. ಇವರು ಕಂಪನಿಯೊಂದಕ್ಕೆ ಸಹ-ಸಂಸ್ಥಾಪಕಿ ಮಾತ್ರವಲ್ಲ, ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಪ್ರಸಿದ್ಧರಾಗಿದ್ದಾರೆ. ಒಂದು ಕೋಟಿ ವೇತನದ ಉದ್ಯೋಗ ತ್ಯಜಿಸಿ 10 ಸಾವಿರ ರೂ.ಗೆ ಜೀವನ ಸಾಗಿಸುತ್ತಿದ್ದ ವಿನೀತಾ, ಇಂದು ಕಟ್ಟಿರೋದು 4,000 ಕೋಟಿ ರೂ ಸಾಮ್ರಾಜ್ಯ. ಭಾರತದ ಪ್ರಮುಖ ಸೌಂದರ್ಯವರ್ಧಕ ಕಂಪನಿಯಾದ ಶುಗರ್ ಕಾಸ್ಮೆಟಿಕ್ಸ್​ನ ಸಹ-ಸಂಸ್ಥಾಪಕಿ, ಸಿಇಒ ಇವರು.

ಈ ಹಂತಕ್ಕೆ ಬರಲು ಆಕೆಯ ಪ್ರಯಾಣ ಸುಲಭದ್ದಾಗಿರಲಿಲ್ಲ. ವಿನೀತಾ ಅವರ ಯಶಸ್ಸು ಮತ್ತು ಬಹುಕೋಟಿ ವ್ಯವಹಾರ ನೋಡಿದ ಸಾಕಷ್ಟು ಮಂದಿಗೆ ಆಕೆಯ ಸಾಧನೆಗಳ ಹಿಂದಿನ ಹೋರಾಟ, ಕಠಿಣ ದಿನಗಳು ಮತ್ತು ಶ್ರಮ ಕಾಣುತ್ತಿಲ್ಲ. 4000 ಕೋಟಿಯ ಕೋಟೆ ಕಟ್ಟಲು ಆಕೆಯ ಛಲ ಆತ್ಮವಿಶ್ವಾಸ ಮತ್ತು ದೃಢತೆ, ಸಮರ್ಪಣೆ ಮತ್ತು ಗ...