Bengaluru, ಫೆಬ್ರವರಿ 5 -- ಪ್ರತಿ ದಿನದ ಸೂರ್ಯೋದಯವು ತನ್ನೊಂದಿಗೆ ಕೆಲವು ಸವಾಲು ಮತ್ತು ಹೋರಾಟಗಳನ್ನು ಹೊತ್ತುತರುತ್ತದೆ. ಆ ಸವಾಲು ಮತ್ತು ಹೋರಾಟಗಳನ್ನು ಎದುರಿಸಲು ಸರಿಯಾದ ಮಾರ್ಗದರ್ಶನದ ಅವಶ್ಯಕತೆಯಿರುತ್ತದೆ. ಆಗ ಅವುಗಳನ್ನು ಬಹಳ ಸುಲಭವಾಗಿ ಜಯಿಸಬಹುದು. ಆದರೆ, ಸರಿಯಾದ ಮಾರ್ಗದರ್ಶನ ಎಲ್ಲಿಂದ ಸಿಗುತ್ತದೆ? ಯಾರು ಕೊಡುತ್ತಾರೆ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಅದಕ್ಕೆ ಶ್ರೀಕೃಷ್ಣನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಮಾರ್ಗದರ್ಶನ ನೀಡಿದ ಭಗವದ್ಗೀತೆಯ ಉಪದೇಶಗಳಲ್ಲಿ ಉತ್ತರವಿದೆ. ಭಗವದ್ಗೀತೆಯು ಎಲ್ಲರ ಮನದಲ್ಲೂ ಹುಟ್ಟುವ ಅನೇಕ ಸವಾಲುಗಳಿಗೆ ಮಾರ್ಗದರ್ಶನ ನೀಡುತ್ತದೆ. ಭಗವದ್ಗೀತೆಯನ್ನು ಸರಿಯಾಗಿ ಓದಿ, ಅರ್ಥೈಸಿಕೊಂಡ ವ್ಯಕ್ತಿಗೆ ಜಯವು ಮರೀಚಿಕೆಯೆಂದು ಅನಿಸುವುದಿಲ್ಲ. ಭಗವದ್ಗೀತೆಯ ಶ್ಲೋಕಗಳು ಪ್ರೇರಣಾದಾಯಕವಾಗಿರುವುದರ ಜೊತೆಗೆ ಜಯಶಾಲಿಗಳಾಗುವ ಮಾರ್ಗವನ್ನು ತೋರುತ್ತದೆ.

ಭಗವದ್ಗೀತೆಯಲ್ಲಿ ಮನುಷ್ಯನು ಬದಲಾವಣೆಯನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ತಿಳಿದಿರಬೇಕು ಎಂದು ಬರೆಯಲಾಗ...